Published
3 weeks agoon
By
Akkare Newsಮಂಗಳೂರು: ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಲು ಹೋಗಿ ಕಾರು ಚಾಲಕನೋರ್ವ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಬಿಜೈ ಕಾಪಿಕಾಡಿನ 6ನೇ ಮುಖ್ಯ ರಸ್ತೆಯಲ್ಲಿ ಗುರುವಾರ ಸಂಭವಿಸಿದೆ.
ಕಾರು ಗುದ್ದಿದ ರಭಸಕ್ಕೆ ಮಹಿಳೆ ಮೇಲಕ್ಕೆ ಎಸೆಯಲ್ಪಟ್ಟು ಕಾಂಪೌಂಡ್ ಮೇಲೆ ನೇತಾಡಿದ್ದು, ಘಟನೆಯಲ್ಲಿ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ, ಆರೋಪಿ ಕಾರು ಚಾಲಕ ಸತೀಶ್ ವಿರುದ್ಧ ಹಿಟ್ ಅಂಡ್ ರನ್ ಕೇಸ್ ದಾಖಲಾಗಿದೆ.
ಹತ್ಯೆಗೆ ಯತ್ನ:
ಆರೋಪಿ ಸತೀಶ್ ತನ್ನ ನೆರೆಮನೆಯ ಮುರಳಿ ಪ್ರಸಾದ್ ಜೊತೆಗೆ ವೈಷಮ್ಯ ಹೊಂದಿದ್ದು ಅದರಂತೆ ಕಾರು ಡಿಕ್ಕಿ ಹೊಡೆಸಿ ಮುರಳಿ ಪ್ರಸಾದ್ ಹತ್ಯೆ ನಡೆಸುವ ಉದ್ದೇಶವನ್ನು ಆರೋಪಿ ಸತೀಶ್ ಹೊಂದಿದ್ದ ಎನ್ನಲಾಗಿದೆ ಅದರಂತೆ ಗುರುವಾರ ಮುರಳಿ ಪ್ರಸಾದ್ ಬರುವುದನ್ನು ಸತೀಶ್ ಕಾದು ಕುಳಿತ್ತಿದ್ದ. ಈ ವೇಳೆ ಮುರಳಿ ಪ್ರಸಾದ್ ಬೈಕ್ ನಲ್ಲಿ ತೆರಳುವುದನ್ನು ಕಂಡ ಸತೀಶ್ ಕೂಡಲೇ ಕಾರು ಚಲಾಯಿಸಿಕೊಂಡು ಹೋಗಿ ಮುರಳಿಗೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಅದೇ ದಾರಿಯಲ್ಲಿ ಪಾದಚಾರಿ ಮಹಿಳೆಯೊಬ್ಬರು ನಡೆದುಕೊಂಡು ಬರುತ್ತಿದ್ದರು ವೇಗವಾಗಿದ್ದ ಕಾರು ಮೊದಲಿಗೆ ಮಹಿಳೆಗೆ ಡಿಕ್ಕಿ ಹೊಡೆದು ಬಳಿಕ ಮುರಳಿ ಪ್ರಸಾದ್ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಮೇಲಕ್ಕೆ ಎಸೆಯಲ್ಪಟ್ಟು ಪಕ್ಕದ ಮನೆಯ ಕಾಂಪೌಂಡ್ ಮೇಲೆ ಸಿಲುಕಿ ನೇತಾಡಿದ್ದು ಕೂಡಲೇ ಅಕ್ಕಪಕ್ಕದ ಜನ ಸೇರಿ ಕಾಂಪೌಂಡ್ ನಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಘಟನೆ ಬಳಿಕ ಸತೀಶ್ ಸ್ಥಳದಿಂದ ಪರಾರಿಯಾಗಿದ್ದು, ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಪಶ್ಚಿಮ ಸಂಚಾರಿ ಠಾಣೆಯಲ್ಲಿ ಹಿಟ್ ಅಂಡ್ ರನ್ ದೂರು ದಾಖಲಾಗಿದೆ.
ಹಳೆ ದ್ವೇಷ:
2023 ರಲ್ಲಿ ಮುರಳಿ ಪ್ರಸಾದ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸತೀಶ್ ಅವರ ತಂದೆಗೆ ಡಿಕ್ಕಿ ಹೊಡೆದು ಕಿರಿಕ್ ಮಾಡಿದ್ದ ಎನ್ನಲಾಗಿದೆ ಇದೇ ಕಾರಣಕ್ಕೆ ಮುರಳಿ ಪ್ರಸಾದ್ ಮೇಲೆ ದ್ವೇಷ ಸಾಧಿಸಲು ಸತೀಶ್ ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ, ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.