Published
4 weeks agoon
By
Akkare Newsವೃತ್ತಿಜೀವನದಲ್ಲಿ ಹಲವಾರು ಸಂದರ್ಭಗಳನ್ನು ಎದುರಿಸುವಾಗ ನಾವು ಧೈರ್ಯ ಕಳೆದುಕೊಳ್ಳದೆ ಮುಂದುವರಿಯಬೇಕು ಹಾಗೂ ಪೂರ್ವ ತಯಾರಿಯನ್ನು ಶ್ರದ್ಧೆಯಿಂದ ಛಲವಿಟ್ಟು ಮಾಡಬೇಕೆಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕುಮಾರಿ ಪೂಜಾ ಹೇಳಿದರು.
ಇವರು ಇತ್ತೀಚೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಐದನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು ” ವೃತ್ತಿ ಜೀವನ – ವಿನ್ಯಾಸ” ಎಂಬ ವಿಷಯದ ಕುರಿತು ಮಾತನಾಡಿದ ಇವರು ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳ ಸದುಪಯೋಗ ಪಡೆದುಕೊಂಡು ಯಶಸ್ಸು ಕಾಣುವ ಮೂಲಕ ವೃತ್ತಿ ಜೀವನವನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಸ್ ಹಾಗೂ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಶ್ರೀ ಕೇಶವ್ ಕುಮಾರ್ ಬಿ ಇವರುಗಳು ಉಪಸ್ಥಿತರಿದ್ದರು. ಸ್ವಯಂ ಸೇವಕಿಯಾದ ಅಶ್ವಿನಿ ಎಂ ಪ್ರಾರ್ಥಿಸಿದರು, ಯಕ್ಷಿತಾ ಸ್ವಾಗತಿಸಿದರು, ಚೈತನ್ಯ ಜಿ ಎಂ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು, ತೀರ್ಥ ವಂದಿಸಿದರು. ಹಾಗೂ ಜೀವಿತ ಕಾರ್ಯಕ್ರಮ ನಿರ್ವಹಿಸಿದರು.