Published
3 weeks agoon
By
Akkare Newsಮಿಯಾರು(ಮೂಡಬಿದ್ರೆ)ನಲ್ಲಿ ನಡೆದ ಲವಕುಶ ಜೋಡು ಕರೆ ಕಂಬಳ ಕೂಟದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ದ್ವಿತೀಯ (ಓಟಗಾರ )ಬಹುಮಾನವನ್ನು ಪಡೆದು ಊರಿಗೆ ಹೆಮ್ಮೆಯನ್ನು ತಂದ,, ಶ್ರೀಮತಿ ಯಶೋಧ/ ರುಕ್ಮಯ್ಯ ಪೂಜಾರಿ ಕೆಮನಾಜೆ ಇವರ ಮಗನಾದ ಕೆ ಕಿಶೋರ್ ಪೂಜಾರಿ ಇವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸದಸ್ಯರಾದ ಶ್ರೀ ರಾಮಣ್ಣ ಪಿಲಿ೦ಜ ಇವರ ನೇತೃತ್ವದಲ್ಲಿ ಮಿತ್ರ ಮಂಡಳಿ ಹಲಸಿನಕಟ್ಟೆ [ರಿ ]ವಿಟ್ಲ ಮುಡ್ನೂರು ಮತ್ತು ಗೆಳೆಯರ ಬಳಗ ಬೇರಿಕೆ ಇದರ ಸಹಯೋಗದಲ್ಲಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಎಲ್ಯಣ್ಣ ಪೂಜಾರಿ ಮೈರುಂಡ, ಶ್ರೀ ನಾರಾಯಣ ಪೂಜಾರಿ ಬದಿಗುಡ್ಡೆ ಮತ್ತು ಪ್ರಮುಖರು ಉಪಸ್ಥಿರಿದ್ದರು. ಅವರ ಮುಂದಿನ ಗೆಲುವಿನ ನಾಗಲೋಟ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಲಾಯಿತು.