Published
3 weeks agoon
By
Akkare Newsಪುತ್ತೂರು:ಮಂಗಳೂರು ಉರ್ವಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಭಾರತಿ ಅವರನ್ನು ದಿಡೀರನೆ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಉರ್ವ ಠಾಣೆಯ ಇನ್ಸ್ಪೆಕ್ಟರ್ ಭಾರತಿ ಅವರು ಮಂಗಳೂರು ವ್ಯಾಪ್ತಿಯ ಅನೇಕ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರ ಕಿರುಕುಳ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಯಾರದೋ ರಾಜಕೀಯ ಕುಮ್ಮಕ್ಕಿನಿಂದ ಇವರ ಈ ಕೃತ್ಯ ಕೆಲವು ಸಮಯಗಳಿಂದ ಹೆಚ್ಚಾಗಿಯೇ ಇತ್ತು.
ಇವರ ಉಪಕಳದ ಬಗ್ಗೆ ಮಂಗಳೂರು ಭಾಗದ ಕಾಂಗ್ರೆಸ್ ಕಾರ್ಯಕರ್ತರು ಪುತ್ತೂರು ಶಾಸಕ ಅಶೋಕ್ ರೈ ಅವರಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಎಸ್ ಐ ಭಾರತಿ ಅವರು ಒಂದು ಪಕ್ಷದ ಆಣತಿಯಂತೆ ನಡೆದುಕೊಳ್ಳುತ್ತಿದ್ದರು, ಅವರ ಸೂಚನೆಯಂತೆ ಪಕ್ಷದ ನಿರಪರಾಧಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸನ ದಾಖಲಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿತ್ತು.
ರಾಜಕೀಯ ಪ್ರಭಾವ ಬಳಸಿ ಉರ್ವ ಠಾಣೆಯಲ್ಲಿ ಕೆಲವು ವರ್ಷಗಳಿಂದ ಎಸ್ ಐ ಆಗಿರುವ ಇವರನ್ನು ಸರಕರ ವರ್ಗಾವಣೆ ಮಾಡಿ ಆದೇಶಿಸಿದೆ. ಇವರನ್ನು ವರ್ಗಾವಣೆ ಮಾಡುವಂತೆ ಪುತ್ತೂರು ಶಾಸಕರಾದ ಆಶೋಕ್ ರೈ ಅವರು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಗೃಹ ಸಚಿವರು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.