Published
3 weeks agoon
By
Akkare Newsಈಜಿಪ್ಟ್ ನಲ್ಲಿ ಶಿಪ್ ನಲ್ಲಿ ಉದ್ಯೋಗಕ್ಕೆ ನೇಮಕವಾಗಿ ತೆರಳಿದ್ದ. ಯುವಕ ಬ್ಯಾಂಕಾಕ್ ನಲ್ಲಿ ಮೃತ ಪಟ್ಟ ಘಟನೆ ವರದಿಯಾಗಿದೆ.ಪಂಬೆತ್ತಾಡಿ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಲಿಖಿನ್(26) ಮೃತಪಟ್ಟ ಯುವಕ.
ಇಂದು ರಾತ್ರಿ ಬೆಂಗಳೂರಿಗೆ ವಿಮಾನ ಮೂಲಕ ಮೃತ ದೇಹ ತಲುಪಲಿದ್ದು,ನಾಳೆ (ಮಾ.18) ರಂದು ಹುಟ್ಟೂರಿಗೆ ಮೃತ ದೇಹ ಬರಲಿದೆ.ಈಜಿಪ್ಟ್ ನಲ್ಲಿ ಶಿಪ್ ನಲ್ಲಿ ಉದ್ಯೋಗಕ್ಕೆ ನೇಮಕ ಗೊಂಡು ಅಲ್ಲಿಗೆ ತೆರೆಳಲು ವಿಮಾನಕ್ಕಾಗಿ ಬ್ಯಾಂಕಾಕ್ ನಲ್ಲಿ ರೂಮ್ ನಲ್ಲಿ ಇದ್ದರು.ಅಲ್ಲಿ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.ಮೃತರು ತಾಯಿ, ಸಹೋದರ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.