Published
3 weeks agoon
By
Akkare Newsಪುತ್ತೂರು: ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಬೈಪಾಸ್ ರಸ್ತೆಯ ಆತ್ಮ ಕಂಫರ್ಟ್ ಬಿಲ್ಡಿಂಗ್ ಗೆ ಬ್ಯಾಂಕಿನವರು ಬೀಗ ಜಡಿದು ಮುಟ್ಟುಗೋಲು ಹಾಕಿಕೊಂಡ ಘಟನೆ ನಡೆದಿದೆ.
ಬಿಲ್ಡಿಂಗ್ ನಲ್ಲಿದ್ದ ಬಾರ್ ಆ್ಯಂಡ್ ರೆಸ್ಟೋರೆಂಟ್, ಬೋರ್ಡಿಂಗ್ ಆ್ಯಂಡ್ ಲಾಡ್ಜ್, ಇತರ ಅಂಗಡಿ ಮಳಿಗೆ ಮತ್ತು ಹಾಲ್ ಸಮೇತವಾಗಿ ಇಡೀ ಕಟ್ಟಡಕ್ಕೆ ಬ್ಯಾಂಕಿನವರು ಬೀಗ ಹಾಕಿದ್ದಾರೆ.
31-07-2024ಕ್ಕೆ ಅನ್ವಯವಾಗುವಂತೆ ರೂ.2,83,19,245 ಮತ್ತು ಬಳಿಕದ ಬಡ್ಡಿಯನ್ನು ಮರುಪಾವತಿ ಮಾಡುವಂತೆ ಬ್ಯಾಂಕ್ ನೋಟೀಸ್ ಮಾಡಿದ್ದರೂ ಮರುಪಾವತಿಯಾಗಲಿಲ್ಲ ಎನ್ನುವ ಕಾರಣಕ್ಕಾಗಿ ಬ್ಯಾಂಕಿನವರು ನಿಯಮಾನುಸಾರ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯ ಕೋರ್ಟ್ ಕಮಿಷನರ್ ಅವರನ್ನು ನೇಮಕಗೊಳಿಸಿತ್ತು. ಸಾಲಕ್ಕೆ ಭದ್ರತೆಗಾಗಿ ನೀಡಲಾಗಿದ್ದ ಆಸ್ತಿ ಮುಟ್ಟುಗೋಲು ಹಾಕುವ ನಿಟ್ಟಿನಲ್ಲಿ ಬ್ಯಾಂಕಿನವರು ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿ ಕಟ್ಟಡಕ್ಕೆ ಬೀಗ ಹಾಕಿ ಮುಟ್ಟು ಗೋಲು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.