Published
3 weeks agoon
By
Akkare Newsಪುತ್ತೂರು: ಕೆಮ್ಮಾಯಿ ದಾರಂದ ಕುಕ್ಕು ನಿವಾಸಿ ಸುಧಾಕರ ಪ್ರಭು (42.ವ.) ಇಂದು ಬೆಳಿಗ್ಗೆ 11 ಗಂಟೆ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮ ಹತ್ಯೆ ಗೈದ ಘಟನೆ ವರದಿಯಾಗಿದೆ.
ಮನೆಯಲ್ಲಿ ಮುಂದಿನ ವಾರ ನೆಮೋತ್ಸವ ನಡೆಯಲಿದ್ದು, ಅದರ ಪೂರ್ವ ತಯಾರಿಯಲ್ಲಿ ಇದ್ದು, ಇಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪುತ್ತೂರು ಹಾಸುಪಾಸಿನಲ್ಲಿ ಪ್ರಭು ಚರುಂಬುರಿ ಮೂಲಕ ಪುತ್ತೂರಿನ ಜನರ ಮನ ಗೆದ್ದಿದ್ದರು. ಆತ್ಮಹತ್ಯೆ ಗೆ ಕಾರಣ ತಿಳಿದುಬಂದಿಲ್ಲ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ