Published
3 weeks agoon
By
Akkare Newsಬಡಗನ್ನೂರು : ಅರಿಯಡ್ಕ ಗ್ರಾಮದ ಪಾಪೆಮಜಲು ಬೇಂಗತ್ತಡ್ಕ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರ ಗರಡಿ ವಾರ್ಷಿಕ ನೇಮೋತ್ಸವವು ಮಾ.22 ರಂದು ಶ್ರೀ ಕ್ಷೇತ್ರದಲ್ಲಿ ಜರಗಲಿದೆ.
ಕಾರ್ಯಕ್ರಮಗಳು;-
ಮಾ.22 ರಂದು ಬೆಳಗ್ಗೆ ಗಂ 8 ಕ್ಕೆ ಗಣಪತಿ ಹೋಮ, 9 ರಿಂದ ಶ್ರೀ ಬ್ರಹ್ಮರ ತಂಬಿಲ, 9.30 ರಿಂದ ಶ್ರೀ ನಾಗದೇವರ ತಂಬಿಲ ಸೇವೆ ನಡೆಯಲಿರುವುದು. ಸಂಜೆ ಗಂ 3.30ಕ್ಕೆ ಭಂಡಾರ ತೆಗೆಯುವುದು,6 ರಿಂದ ವಿವಿಧ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ, ರಾತ್ರಿ ಗಂ 8 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂ 9-30ಕ್ಕೆ ಬೈದೇರುಗಳ ಗರಡಿ ಇಳಿಯುವುದು,11.30ಕ್ಕೆ ಮೀಸೆ ಧರಿಸುವುದು,ಬಳಿಕ ಮಾಣಿಬಾಲೆ ಇಳಿಯುವುದು ಬೈದೇರುಗಳ ಸೇಟು, ಪ್ರಸಾದ ವಿತರಣೆ ಬಳಿಕ ಕಂಚಿ ಕಲ್ಲಿಗೆ ಕಾಯಿ ಒಡೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಅಡಳಿತ ಮೊಕ್ತೆಸರರಾದ ಕೇಶವ ಎಂ ಎಸ್ ಹಾಗೂ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಪೆರ್ವೋಡಿ ಮತ್ತು ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.