Published
1 week agoon
By
Akkare Newsರಾಜ್ಯದ ಸುಪ್ರಸಿದ್ಧಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಶ್ರೀಮಂತ ದೇಗುಲಗಳ ಪೈಕಿ ಅಗ್ರಸ್ಥಾನದಲ್ಲಿದೆ. ದೇಶ-ವಿದೇಶಗಳಿಂದ ಜನರು ವರ್ಷಪೂರ್ತಿ ಭೇಟಿ ನೀಡುವ ಈ ಪುಣ್ಯಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಸದಸ್ಯ ಸ್ಥಾಣಕ್ಕೆ ಭಾರಿ ರಾಜಕೀಯ ಲಾಬಿ ನಡೆದಿದೆ.
ಇದೀಗ, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವರೊಬ್ಬರು ಓರ್ವ ಮಾಜಿ ರೌಡಿಶೀಟರ್ ಹೆಸರು ಶಿಫಾರಸ್ಸು ಮಾಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಕಾಂಗ್ರೆಸ್ನ ಹರೀಶ್ ಇಂಜಾಡಿ ಎಂಬಾತ ತಮಗೆ ಸದಸ್ಯ ಸ್ಥಾನ ನೀಡಬೇಕು ಅಂತ ಪಟ್ಟು ಹಿಡಿದಿದ್ದಾರೆ. ಈತ ಓರ್ವ ಮಾಜಿ ರೌಡಿಶೀಟರ್ ಆಗಿದ್ದು, ದೇವಸ್ಥಾನದ ಹಣ್ಣುಕಾಯಿ ಮಳಿಗೆಗಳ ಟೆಂಡರ್ನಲ್ಲಿ ನಕಲಿ ಚೆಕ್ ನೀಡಿ ದೇವಸ್ಥಾನಕ್ಕೆ ವಂಚನೆ ಮಾಡಿದ್ದರು. ಈ ಬಗ್ಗೆ ಆಡಳಿತ ಮಂಡಳಿ ನೀಡಿದ ದೂರಿನಿಂದ ಹರೀಶ್ ಜೈಲುವಾಸ ಕೂಡ ಅನುಭವಿಸಿದ್ದರು.

ಕುಕ್ಕೆಯಲ್ಲಿನ ರಥೋತ್ಸವಗಳಲ್ಲಿ ಮಲೆಕುಡಿಯ ಜನಾಂಗದವರದ್ದು ಮುಖ್ಯ ಪಾತ್ರ. ಒಂದು ಸದಸ್ಯ ಸ್ಥಾನವನ್ನು ಮಲೆಕುಡಿಯ ಜನಾಂಗಕ್ಕೆ ಮೀಸಲಾಗಿದೆ. ಆದರೆ, ಸಚಿವರು ಮಲೆಕುಡಿಯ ಜನಾಂಗವನ್ನು ಬಿಟ್ಟು ಬೇರೆಯವರಿಗೆಲ್ಲ ಶಿಫಾರಸ್ಸು ಮಾಡಿದ್ದಾರೆ. ಇದರಿಂದ ಮಲೆಕುಡಿಯ ಜನಾಂಗ ಕೆರಳಿದೆ.