Published
2 weeks agoon
By
Akkare Newsಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಲಾಂಗ್ ಬಳಸಿ ತೊಂದರೆಗೆ ಸಿಲುಕಿರುವ ಬಿಗ್‌ಬಾಸ್ ನ ರಜತ್ ಹಾಘೂ ವಿನಯ್ ಗೌಡ ಒಮ್ಮೆ ಬಿಡುಗಡೆಯಾಗಿ ಮತ್ತೆ ಅರೆಸ್ಟ್ ಆಗಿದ್ದಾರೆ. ವಿಚಾರಣೆಗಾಗಿ ಈ ಇಬ್ಬರನ್ನೂ ಸೋಮವಾರ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ಬಿಟ್ಟು ಕಳುಹಿಸಿದ್ದರು. ಬಳಿಕ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ರಜತ್ ಕಿಶನ್ ಮತ್ತು ವಿನಯ್ ಗೌಡರನ್ನು ಮಂಗಳವಾರ ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡು ಬಂಧಿಸಿದ್ದಾರೆ.
ಬೆಂಗಳೂರು: ಸಾರ್ವಜನಿಕವಾಗಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ವಿಚಾರಣೆಗಾಗಿ ಈ ಇಬ್ಬರನ್ನೂ ಸೋಮವಾರ ವಶಕ್ಕೆ ತೆಗೆದುಕೊಂಡಿದ್ದ ಪೊಲೀಸರು ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ಬಿಟ್ಟು ಕಳುಹಿಸಿದ್ದರು. ಬಳಿಕ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ರಜತ್ ಕಿಶನ್ ಮತ್ತು ವಿನಯ್ ಗೌಡರನ್ನು ಮಂಗಳವಾರ ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡು ಬಂಧಿಸಿದ್ದಾರೆ.
ಪೊಲೀಸರ ನೋಟಿಸ್ ಹಿನ್ನೆಲೆಯಲ್ಲಿ ರಜತ್ ಮತ್ತು ವಿನಯ್ ಗೌಡ, ಸೋಮವಾರ ಸಂಜೆ ಬಸವೇಶ್ವರನಗರ ಠಾಣೆಗೆ ಬಂದಿದ್ದರು. ಬಳಿಕ ಅವರನ್ನು ತಡರಾತ್ರಿವರೆಗೆ ವಿಚಾರಣೆ ನಡೆಸಲಾಗಿತ್ತು. ರಜತ್ ಪತ್ನಿ ಅಕ್ಷಿತಾ ಅವರು ಫೈಬರ್‌ನಿಂದ ಮಾಡಿದ ಮಚ್ಚನ್ನು ರಾತ್ರಿ ಪೊಲೀಸರಿಗೆ ತಂದುಕೊಟ್ಟು, ಆ ನಕಲಿ ಮಚ್ಚನ್ನೇ ರಜತ್ ರೀಲ್ಸ್ ನಲ್ಲಿ ಬಳಸಿದ್ದರು ಎಂದು ಹೇಳಿದ್ದರು. ನಂತರ ಪೊಲೀಸರು ರಜತ್ ಮತ್ತು ವಿನಯ್ ಗೌಡರನ್ನು ಬಿಟ್ಟುಕಳುಹಿಸಿದ್ದರು.
ಆದರೆ, ರೀಲ್ಸ್ ವಿಡಿಯೊದಲ್ಲಿದ್ದ ಮಚ್ಚು ಮತ್ತು ಅಕ್ಷಿತಾ ಅವರು ತಂದುಕೊಟ್ಟಿದ್ದ ಮಚ್ಚಿಗೂ ವ್ಯತ್ಯಾಸವಿರುವುದು ಗೊತ್ತಾಗಿ ಪೊಲೀಸರು ರಜತ್ ಹಾಗೂ ವಿನಯ್ ಗೌಡಗೆ ಕರೆ ಮಾಡಿ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಬಳಿಕ ಆ ಇಬ್ಬರೂ ಬಂಧನ ಭೀತಿಯಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ, ನಾಪತ್ತೆಯಾಗಿದ್ದರು. ಅಂತಿಮವಾಗಿ ಪೊಲೀಸರು, ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿದ ನಂತರ ರಜತ್ ಮತ್ತು ವಿನಯ್ ಗೌಡ ಠಾಣೆಗೆ ಬಂದರು.
ಫೈಬರ್ ಮಚ್ಚು ತಂದುಕೊಟ್ಟು ತನಿಖೆಯ ದಿಕ್ಕುತಪ್ಪಿಸಲು ಯತ್ನಿಸಿದ ರಜತ್ ಪತ್ನಿ ಅಕ್ಷಿತಾ ಅವರಿಗೂ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದರು. ಇದರ ಬೆನ್ನಲ್ಲೇ ಅಕ್ಷಿತಾ ಅವರು ಠಾಣೆಗೆ ಬಂದು ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದರು.
ಪತಿ ರಜತ್‌ರನ್ನು ಪಾರು ಮಾಡಲು ಅಕ್ಷಿತಾ ಅವರು ಫೈಟರ್ ಮಚ್ಚು ತಂದುಕೊಟ್ಟಿರುವ ಅನುಮಾನವಿದೆ. ಅಕ್ಷಿತಾ ಕೊಟ್ಟಿರುವ ಮಚ್ಚಿಗೂ ಮತ್ತು ರೀಲ್ಸ್ನಲ್ಲಿ ಕಾಣಿಸಿರುವ ಮಚ್ಚಿಗೂ ತಾಳೆ ಆಗುತ್ತಿಲ್ಲ, ರೀಲ್ಸ್‌ನಲ್ಲಿ ಬಳಸಿರುವ ಅಸಲಿ ಮಚ್ಚನ್ನು ಜಪ್ತಿ ಮಾಡಬೇಕಿದೆ. ಆದರೆ, ಆರೋಪಿಗಳು ಆ ಮಚ್ಚಿನ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ, ಮತ್ತು ತನಿಖೆಗೂ ಸಹಕರಿಸುತ್ತಿಲ್ಲ. ಹೀಗಾಗಿ, ಹೆಚ್ಚಿನ ವಿಚಾರಣೆಗಾಗಿ ಆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆದುಲಾಗುತ್ತದೆ ಎಂದು ಹಿರಿದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ರಜತ್ ಮತ್ತು ವಿನಯ್ ಗೌಡ, ತಾವು ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡಿಲ್ಲ ಇದು ನಾಗರಬಾವಿಯ ಅಕ್ಷಯಮ್ ಸ್ಟುಡಿಯೊದ ಶೂಟಿಂಗ್ ಸೆಟ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೊ ಆಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕಾಗಿ ಈ ವಿಡಿಯೊ ಮಾಡಿದ್ದೇವೆ. ರೀಲ್ಸ್‌ನಲ್ಲಿ ಬಳಸಿರುವ ಮಚ್ಚು ಫೈಬರ್ ನದು ಎಂದು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಪೊಲೀಸರು ಈ ಇಬ್ಬರನ್ನೂ ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಮಹಜರು ವೇಳೆ ಪೊಲೀಸರು, ಆ ಇಬ್ಬರಿಗೂ ಪ್ರಶ್ನೆಗಳ ಸುರಿಮಳೆ ಸುರಿಸಿದರು.
ಆದರೂ ರೀಲ್ಸ್‌ಗೆ ಬಳಸಿದ್ದ ಅಸಲಿ ಮಚ್ಚು ಎಲ್ಲಿದೆ ಎಂಬ ಗುಟ್ಟು ಬಿಟ್ಟುಕೊಡದ ರಜತ್ ಮತ್ತು ವಿನಯ್ ಗೌಡ, ಶೂಟಿಂಗ್ ಸೆಟ್ ಹಾಕಿದ್ದವರು ಮಚ್ಚನ್ನು ತೆಗೆದುಕೊಂಡು ಹೋಗಿರಬಹುದೆಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಪೊಲೀಸರು ಸ್ಟುಡಿಯೊದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಪರಿಶೀಲಿಸಿದರೂ ಮಚ್ಚು ಸಿಕ್ಕಿಲ್ಲ. ಸ್ಟುಡಿಯೋದ ಮೂಲೆಮೂಲೆಯಲ್ಲಿ ಹುಡುಕಾಡಿದರೂ ಲಾಂಗ್ ಪತ್ತೆಯಾಗಿಲ್ಲ ಹೀಗಾಗಿ, ರಜತ್ ಮತ್ತು ವಿನಯ್ ವಿರುದ್ಧ ಸಾಕ್ಷ್ಯನಾಶದ ಆರೋಪ ಕೂಡ ಎದುರಾಗುವ ಸಾಧ್ಯತೆಯಿಂದೆ.