Connect with us

ಶಾಲಾ ಚಟುವಟಿಕೆ

ಪುತ್ತೂರು ಒಲಿಂಪಿಯಾಡ್ ಪರೀಕ್ಷೆ : ಎರಡನೆಯ ಹಂತಕ್ಕೆ ಆಯ್ಕೆಯಾದ ಅಂಬಿಕಾದ ನಾಲ್ವರು ವಿದ್ಯಾರ್ಥಿಗಳು

Published

on

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ ಡಿಸೆಂಬರ್ ತಿಂಗಳಿನಲ್ಲಿ ನವದೆಹಲಿಯ ಸಿಲ್ವರ್ ಝೋನ್ ಫೌಂಡೇಶನ್ ನಡೆಸಿರುವ ಒಲಿಂಪಿಯಾಡ್ ಪರೀಕ್ಷೆ ಬರೆದಿದ್ದು, ಇದೀಗ ಫಲಿತಾಂಶ ಪ್ರಕಟವಾಗಿದೆ.
ಪರೀಕ್ಷೆ ಬರೆದಿದ್ದ ಒಟ್ಟು 512 ವಿದ್ಯಾರ್ಥಿಗಳಲ್ಲಿ ಸಂಪೂರ್ಣ ಅಂಕಗಳನ್ನು ತಮ್ಮದಾಗಿಸಿಕೊಂಡ ಸಂಸ್ಥೆಯ ಒಟ್ಟು ನಾಲ್ಕು ಮಂದಿ ವಿದ್ಯಾರ್ಥಿಗಳು ಎರಡನೆಯ ಹಂತಕ್ಕೆ ಆಯ್ಕೆಯಾಗಿದ್ದಾರೆ.

 

ಉಳಿದಂತೆ 90 ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೂ, 54 ವಿದ್ಯಾರ್ಥಿಗಳು ಬೆಳ್ಳಿಯ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೂ, 27 ವಿದ್ಯಾರ್ಥಿಗಳು ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನೂ, ಉಳಿದಂತೆ ಎಲ್ಲಾ ಪರೀಕ್ಷೆ ಬರೆದ ವಿದ್ಯಾರ್ಥಿಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ಪತ್ರ ಪಡೆದುಕೊಂಡಿರುತ್ತಾರೆ.

ಉಪ್ಪಿನಂಗಡಿಯ ಶೈನಿ ಪೈಸ್ ಮತ್ತು ಸುಪ್ರೀತ್ ಜೆ . ಲೋಬೋ ಪುತ್ರ 5 ನೇ ತರಗತಿಯ ಸಂಹಿತ್ ಜೊಸ್ಸಿ ಲೋಬೋ, ಬಡಗನ್ನೂರಿನ ಸ್ವರ್ಣಶ್ರೀ ಎಸ್. ಪಿ. ಮತ್ತು ಶಿರೀಶ್ ಬಿ.ಪಿ ದಂಪತಿ ಪುತ್ರ 2 ನೇ ತರಗತಿಯ ಚಿರಾಗ್ ಎಸ್ ಪಟ್ಟೆ.

 

ನೈತಾಡಿಯ ಪೂರ್ಣಿಮಾ ಮತ್ತು ಯಶವಂತ ಎ. ದಂಪತಿ ಪುತ್ರ 1ನೇ ತರಗತಿಯ ಹರ್ಷಿಲ್ ಬಂಗೇರ ಎನ್ ಇಂಗ್ಲೀಷ್ ವಿಷಯದಲ್ಲಿ ಹಾಗೂ ಕೆಮ್ಮಾಯಿಯದಿವ್ಯಾ ಎ.ಎಸ್ ಮತ್ತು ಹೇಮಚಂದ್ರ ಕೆ.ಎಸ್ ದಂಪತಿ ಪುತ್ರಿ, 2 ನೇ ತರಗತಿಯ ಶಾರ್ವಿ ಕೆ. ಎಚ್ ವಿಜ್ಞಾನ ವಿಷಯದಲ್ಲಿ ಮುಂದಿನ ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಚಿರಾಗ್ ಎಸ್ ಪಟ್ಟೆ ಇವರು ಬೆಳ್ಳಿ ಪದಕ ವಿಜೇತರಾಗಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement