Published
1 week agoon
By
Akkare Newsಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ, ರಾಷ್ಟ್ರೀಯ ಬಿಲ್ಲವ ಮಂಡಲದ ಸಂಚಾಲಕಿ,ಜೆಸಿಐ ಇಂಡಿಯಾ ಇದರ ವಲಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ರವರನ್ನು ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡದ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಜವಾಹರ್ ಬಾಲ್ ಮಂಚ್ ರಾಷ್ಟ್ರೀಯ ಅಧ್ಯಕ್ಷ ಡಾ. ಹರಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.