Connect with us

ಇತರ

ಜೆಸಿಐ ಇಂಡಿಯಾ ಇದರ ರಾಷ್ಟ್ರೀಯ ಉಪಾಧ್ಯಕ್ಷರಾದ JFR ಸೂರ್ಯನಾರಾಯಣ ವರ್ಮ ವಿಟ್ಲ ಘಟಕಕ್ಕೆ ಭೇಟಿ

Published

on

ವಿಟ್ಲ : ಮಾ.22.ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕರಾದ JFR ಸೂರ್ಯ ನಾರಾಯಣ ವರ್ಮಾ ಇವರು ಜೆಸಿಐ ವಿಟ್ಲ ಘಟಕಕ್ಕೆ ಅಧಿಕೃತ ಭೇಟಿ ನೀಡಿದರು. ಇವರನ್ನು ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೆಸಿಐ ಸೇನೆಟರ್ ಸೌಮ್ಯ ಚಂದ್ರಹಾಸ್ ಹಾಗೂ ಸರ್ವ ಸದಸ್ಯರು ಪ್ರೀತಿ ಪೂರ್ವಕ ವಾಗಿ ಗಜಾನನ ಸಭಾಭವನದಿಂದ ವಾಹನ ಜಾಥಾದ ಮೂಲಕ ಜೆಸಿ ಆಂಗ್ಲ ಮಾಧ್ಯಮ ಶಾಲೆಗೆ ಕರೆತಂದು, ಶಾಲೆಗೆ ಜೆಸಿಐ ವಿಟ್ಲ ಘಟಕ ದ ವತಿಯಿಂದ ಜೆಸಿಐ ಶಾಶ್ವತ ಯೋಜನೆಯಡಿಯಲ್ಲಿ ಸಿಸಿಟಿವಿ ಕ್ಯಾಮೆರ ವನ್ನು ರಾಷ್ಟೀಯ ಉಪಾಧ್ಯರು ಶಾಲೆಯ ಅಧ್ಯಕ್ಷರಾದ ಜೆಸಿ ಶ್ರೀಧರ್ ಶೆಟ್ಟಿ ರವರಿಗೆ ಹಸ್ತಾಂತರಿ ಸಿದರು, ರಾಷ್ಟ್ರೀಯ ಉಪಾಧ್ಯಕ್ಷರು ಈ
ಸಂದರ್ಭದಲ್ಲಿ ಜೆಸಿಐ ವಿಟ್ಲದ ಬಗ್ಗೆ ಶ್ಲಾಘನೆಯ ಮಾತನಾಡಿ ಇನ್ನು ಹೆಚ್ಚಿನ ವ್ಯಕ್ತಿತ್ವ ವಿಕಸನದ ಜೊತೆಯಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮ ನೀಡಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮ ದಲ್ಲಿ , ಜೆಸಿಐ ಜೋನ್ 15 ರ ವಲಯಧ್ಯಕ್ಷರಾದ ಜೆಸಿಐ ಸೇನೆಟರ್ ಅಭಿಲಾಷ್ ಬಿ ಎ, ವಲಯಉಪಾಧ್ಯಕ್ಷರಾದ ಜೆ ಫ್ ಸಂತೋಷ್ ಶೆಟ್ಟಿ,ಶಾಲೆಯ ಅಧ್ಯಕ್ಷರಾದ ಜೆಸಿ ಶ್ರೀಧರ್ ಶೆಟ್ಟಿ ಕಾರ್ಯಕ್ರಮ ದ ಅಧ್ಯಕ್ಷರಾದ ಜೆಸಿಐ ಸೇನೆಟರ್ ಸೌಮ್ಯ ಅಧ್ಯಕ್ಷರು ಜೆಸಿ ವಿಟ್ಲ ಹಾಗೂ ಜೋನ್ 15 ರ ಪದಾಧಿಕಾರಿಗಳು, ವಿಟ್ಲ ಜೆಸಿಐ ನ ಪೂರ್ವಧ್ಯಕ್ಷರು ಗಳು ಹಾಗೂ ಹೆಚ್ಚಿನ ಸದಸ್ಯರು ಹಾಜರಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.ಜೆಸಿ ರಾಧಾಕೃಷ್ಣ ಏರುoಬು ವೇದಿಕೆಗೆ ಆಹ್ವಾನಿಸಿದರು, ಹೇಮಲತಾ ಜೈಕಿಶನ್ ವಂದಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement