Published
1 week agoon
By
Akkare Newsಬೆಂಗಳೂರು; ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಮತ್ತೆ ಶಾಕ್ ಕೊಟ್ಟಿದೆ. ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಷ್ಟು ಹೆಚ್ಚಳ ಮಾಡಬೇಕೆಂಬ ಬಗ್ಗೆ ಸಮಾಲೋಚನೆ ಮಾಡಲಾಯಿತು. ಅಂತಿಮವಾಗಿ 4 ರೂಪಾಯಿ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಸದ್ಯ ಹೋಮೋಜಿನೆಸ್ಟ್ ಟೋನ್ಡ್ ಹಾಲು ಅರ್ಧ ಲೀಟರ್ ₹24 ರೂಪಾಯಿ. ಹೋಮೋಜಿನೆಸ್ಟ್ ಟೋನ್ಡ್ ಹಾಲು ಒಂದು ಲೀಟರ್ ₹45 ರೂಪಾಯಿ ಇದೆ. ಹೊಸ ದರ ಜಾರಿಗೆ ಬಂದ್ರೆ ಅರ್ಧ ಲೀಟರ್ 26 ಮತ್ತು ಒಂದು ಒಂದು ಲೀಟರ್ ಹಾಲು 49 ರೂಪಾಯಿ ಆಗಲಿದೆ.