Published
1 week agoon
By
Akkare News ಶನಿವಾರದಂದು ಗಲ್ಫ್ ರಾಷ್ಟ್ರಗಳಲ್ಲಿ ರಂಝಾನ್ 29 ಪೂರ್ತಿಯಾಗಲಿದ್ದು, ಅಂದು ರಾತ್ರಿ ಶವ್ವಾಲ್ ಮಾಸದ ಚಂದ್ರದರ್ಶನದ ಸಾಧ್ಯತೆಯಿದೆ. ಶನಿವಾರದಂದು ಚಂದ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಲ್ಲಿ ಸೌದಿ ಅರೇಬಿಯಾದ ಸುಪ್ರೀಂ ಕೋರ್ಟ್ ಮನವಿ ಮಾಡಿದೆ.
ಶನಿವಾರ ಚಂದ್ರದರ್ಶನವಾದರೆ ಸೌದಿ, ಯುಎಇ, ಬಹ್ಪೈನ್, ಕುವೈತ್ ಹಾಗೂ ಕತಾರ್ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ಆದಿತ್ಯವಾರ ಈದುಲ್ ಫಿತರ್ ಹಬ್ಬ ಆಚರಿಸಲಾಗುತ್ತದೆ. ಒಂದುವೇಳೆ ಶನಿವಾರ ಚಂದ್ರದರ್ಶನವಾಗದಿದ್ದಲ್ಲಿ ಆದಿತ್ಯವಾರ ರಂಝಾನ್ ಮಾಸದ ಕೊನೆಯ ದಿನವಾಗಲಿದ್ದು, ಶವ್ವಾಲ್ ಪ್ರಥಮ ದಿನವಾದ ಸೋಮವಾರ ಈದುಲ್ ಫಿತರ್ ದಿನವಾಗಲಿದೆ.