Published
5 days agoon
By
Akkare Newsಪುತ್ತೂರು :ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ, ಪುತ್ತೂರು, ದ. ಕ. ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂ|ರದ ಮೇಷ ಮಾಸ ೧೬ ಸಲುವ ದಿನಾಂಕ 29-04-2025ನೇ ಮಂಗಳವಾರ ಬೆಳಿಗ್ಗೆ ಗಂಟೆ 9.00ರಿಂದ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಜಾತ್ರೋತ್ಸವ ಹಾಗೂ ಧರ್ಮದೈವಗಳ ನೇಮೋತ್ಸವ ಅನ್ನಸಂತರ್ಪಣೆಯೊಂದಿಗೆ ಜರಗಲಿರುವುದು,
ಇದರ ಆಮಂತ್ರಣ ಪತ್ರ ವನ್ನು 30/03/2025ನೇ ಆದಿತ್ಯ ವಾರ ದಂದು ದೇವಸ್ಥಾನ ದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಬಿಡುಗಡೆ ಗೊಳಿಸಿದರು, ಈ ಸಂದರ್ಭದಲ್ಲಿ ದೇವಸ್ಥಾನದ. ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ನಿರಂಜನ ರೈ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್, ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯರಾದ, ಕೇಶವ ಭಂಡಾರಿ ಕೈಪ, ಕುಮಾರನಾಥ ಪಲ್ಲತ್ತಾರು, ದೇವದಾಸ ಗೌಡ ಪಿಲಿಗುಂಡ, ಸತೀಶ್ ನಾಯಕ್ ಮೋನಡ್ಕ, ವಿಜಯ ನಾಯ್ಕ ಲಿಂಗಪಾಲು, ಶ್ರೀಮತಿ ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ಶ್ರೀಮತಿ ಯಮುನಾ ಡೆಕ್ಕಾಜೆ, ಮತ್ತು ಭಕ್ತರು ಉಪಸ್ಥಿತರಿದ್ದರು, ದೇವಸ್ಥಾನ ದ ವ್ಯವಸ್ಥಾಪಕರಾದ ಸಂತೋಷ ಕೆದಿಕಂಡೆ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.