Published
4 days agoon
By
Akkare Newsಪ್ರವಾಹ, ಭೂಕಕುಸಿತಗಳಂತ ನೈಸರ್ಗಿಕ ವಿಕೋಪಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಹೊಂದಿ ರಬೇಕೆಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಕೃಷ್ಣ ಡಿ ಹೇಳಿದರು. ಇವರು ಇತ್ತೀಚಿಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಆರನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ನೈಸರ್ಗಿಕ ವಿಕೋಪಗಳು ಮತ್ತು ಅವುಗಳ ನಿರ್ವಹಣೆ” ಎಂಬ ವಿಷಯದ ಕುರಿತು ಮಾತನಾಡಿದರು.
ಭೂವಿಜ್ಞಾನ, ಜಲವಿಜ್ಞಾನ ಮತ್ತು ಹವಾಮಾನಗಳ ಬಗ್ಗೆ ಅರಿವು ಪಡೆದು ಮತ್ತು ನೈಸರ್ಗಿಕ ವಿಕೋಪಗಳು ಉಂಟಾದ ಸಂದರ್ಭದಲ್ಲಿ ಒಟ್ಟಾಗಿ ಕೆಲಸ ಮಾಡುವ ಮುಖಾಂತರ ಸಂಭವಿಸುವ ದುರಂತದ ಪ್ರಮಾಣವನ್ನು ಕಡಿಮೆಗೊಳಿಸಬಹುದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಶ್ರೀ ಕೇಶವಕುಮಾರ್ ಬಿ ಇವರುಗಳು ಉಪಸ್ಥಿತರಿದ್ದರು.
ಸ್ವಯಂಸೇವಕೀಯರಾದ ಸಂಗೀತಾ,ಪ್ರಿಯಲತಾ, ತ್ರಿಷಾ ಪ್ರಾರ್ಥಿಸಿದರು. ತ್ರಿಷಾ ಸ್ವಾಗತಿಸಿದರು, ಜೀವಿತ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು, ದೀಕ್ಷಾ ಎನ್.ಎಸ್ ವಂದಿಸಿದರು ಹಾಗೂ ಹರ್ಷಿತಾ ಕೆ ಕಾರ್ಯಕ್ರಮ ನಿರ್ವಹಿಸಿದರು.