Published
3 days agoon
By
Akkare Newsಎಪ್ರಿಲ್ 1ರಿಂದ ರಾಜ್ಯದ ಜನರು ಹಾಲು- ಮೊಸರು, ವಿದ್ಯುತ್ ದರ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಏರಿಕೆ ಸೇರಿ ವಿವಿಧ ವಸ್ತುಗಳ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸಲಿದ್ದಾರೆ.
ಬ್ಯಾಂಕುಗಳ ಉಳಿತಾಯ ಖಾತೆಯ ಕನಿಷ್ಠ ಮೊತ್ತ ಏರಿಕೆ, ಪ್ರೀಮಿಯಂ ಹೊಟೇಲ್‌ಗಳ ವಾಸ್ತವ್ಯಕ್ಕೆ ಜಿಎಸ್‌ಟಿ ಹೇರಿಕೆಯೂ ಜನರ ಜೇಬಿಗೆ ಕತ್ತರಿ ಹಾಕಲಿದೆ. ದರ ಏರಿಕೆ ಮಾಹಿತಿ ಇಲ್ಲಿದೆ…
ಹಾಲು, ಮೊಸರು ದುಬಾರಿ
1 ಲೀ. ನಂದಿನಿ ಹಾಲು ಮತ್ತು ಮೊಸರಿಗೆ 4 ರೂ. ಹೆಚ್ಚ ಳ. ಅರ್ಧ ಲೀಟರ್‌ಗೆ 2 ರೂ. ಏರಿಕೆ
ವಿದ್ಯುತ್ ದರ ಏರಿಕೆ ಶಾಕ್
ಕನಿಷ್ಠ ಶುಲ್ಕ 25 ರೂ. ಮತ್ತು ಪ್ರತೀ ಯೂನಿಟ್‌ಗೆ ಈಗ 6.16 ರೂ.
ಕಸದ ಶುಲ್ಕ ಸಂಗ್ರಹ
ಬೆಂಗಳೂರಿನಲ್ಲಿ ವಸತಿ ಕಟ್ಟಡಗಳಿಗೆ
10 ರೂ., ವಾಣಿಜ್ಯ ಕಟ್ಟಡಗಳಿಗೆ
500 ರೂ. ತೆರಿಗೆ
ಮುದ್ರಾಂಕ ಶುಲ್ಕ ಏರಿಕೆ
ಮುದ್ರಾಂಕ ಶುಲ್ಕ, ಅಫಿದವಿತ್ ಶುಲ್ಕ ಕ್ರಮವಾಗಿ 50ರಿಂದ 500 ರೂ., 20ರಿಂದ 100 ರೂ.
ಲಿಫ್ಟ್, ಟ್ರಾನ್ಸ್‌ಫಾರ್ಮರ್
ಕಟ್ಟಡಗಳ ಲಿಫ್ಟ್, ಟ್ರಾನ್ಸ್‌ಫಾರ್ಮರ್ ನವೀಕರಣ ಶುಲ್ಕ 1,000 ರೂ.ಗೆ ಹಾಗೂ 8,000 ರೂ.ಗೆ ಏರಿಕೆ
ಟೋಲ್ ಶುಲ್ಕವೂ ಹೆಚ್ಚಳ
ಟೋಲ್ ಶುಲ್ಕ 7 ಅಥವಾ 8 ರೂ. ಇದ್ದುದ್ದನ್ನು 10 ರೂ.ಗೆ ಪೂರ್ಣಾಂಕ ಗೊಳಿಸಲಾಗುತ್ತಿದೆ.
ಬ್ಯಾಂಕ್ ಖಾತೆ: ಕನಿಷ್ಠ ಬಾಕಿ ಏರಿಕೆ
ಎಸ್‌ಬಿಐ ಸೇರಿ ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆ ಕನಿಷ್ಠ ಮೊತ್ತ ಏರಿಕೆ. ಪಾಲಿಸದಿದ್ದರೆ ದಂಡ.
ಕಾರುಗಳ ಬೆಲೆ ದುಬಾರಿ
ಮಾರುತಿ ಸುಜುಕಿ- ಶೇ. 4, ಹ್ಯುಂಡೈ, ಮಹೀಂದ್ರಾ, ಕಿಯಾ – ಶೇ. 2 ತುಟ್ಟಿ
ಹೊಟೇಲ್ ವಾಸ್ತವ್ಯಕ್ಕೆ ಹೆಚ್ಚು ಜಿಎಸ್‌ಟಿ
ವಾಸ್ತವ್ಯಕ್ಕೆ 7,500 ರೂ. ಪಡೆಯುವ ಹೊಟೇಲ್‌ಗಳಲ್ಲಿ ಶೇ. 18
ಜಿಎಸ್‌ಟಿ ಹೇರಿಕೆ.
ಔಷಧ ಬೆಲೆ ಹೆಚ್ಚಳ
ಸೋಂಕು, ಮಧುಮೇಹ ಸೇರಿ 900ಕ್ಕೂ ಹೆಚ್ಚು ಔಷಧಗಳ ಬೆಲೆಯಲ್ಲಿ ಶೇ. 1.47 ಏರಿಕೆ.
ಸುಡಲಿದೆ ಸಿಗರೇಟ್
ಸಿಗೆರೇಟ್ ತೆರಿಗೆ ಪ್ರಮಾಣ ಶೇ. 16 ಬೆಲೆ ಹೆಚ್ಚಿಸಿದ್ದರಿಂದ ದುಬಾರಿ
ಬೆಳ್ಳಿ ಉತ್ಪನ್ನಗಳೂ ತುಟ್ಟಿ
ಬೆಳ್ಳಿ ಹಾಗೂ ಬೆಳ್ಳಿಯ ಉತ್ಪನ್ನಗಳ ಮೇಲಿನ ಆಮದು ಸುಂಕ ಏರಿಕೆ
ಆಮದು ಕಾರಿನ ಬೆಲೆ ಹೆಚ್ಚು
ಹೆಚ್ಚಿನ ಪ್ರಮಾಣದ ತೆರಿಗೆ ವಿಧಿಸಿದ್ದು ಕಾರಣ