Published
2 days agoon
By
Akkare Newsದೆಹಲಿ ಏಪ್ರಿಲ್ 2: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ರುದ್ರಾಕ್ಷಿ ಮಾರಿಕೊಂಡಿದ್ದ ಹುಡುಗಿ ಮೊನಾಲಿಸ ಅತ್ಯಾಚಾರದ ಆರೋಪ ಮಾಡಿದ್ದಾಳೆ. ತನ್ನ ಪಾಡಿಗೆ ರುದ್ರಾಕ್ಷಿ ಮಾಲೆ ಮಾರಿಕೊಂಡು ಹೇಗೋ ಜೀವನ ನಡೆಸುತ್ತಿದ್ದ ಮೊನಾಲಿಸಾಳನ್ನು ಸಿನಿಮಾ ನಟಿ ಮಾಡುವುದಾಗಿ ಕರೆಸಿ ನಿರ್ದೇಶಕ ಅತ್ಯಾಚಾರ ಮಾಡಿದ್ದಾನೆ ಎಂದು ಮೊನಾಲಿಸಾ ದೂರಿದ್ದಾಳೆ.
ಹೌದು.. ನಿರ್ದೇಶಕ ಸನೋಜ್ ಮಿಶ್ರಾ ಅವರ ಮೇಲೆ ಮೊನಾಲಿಸಾ ಅತ್ಯಾಚಾರದ ಆರೋಪ ಮಾಡಿದ್ದು ಸದ್ಯ ಅವರನ್ನು ಬಂಧಿಸಲಾಗಿದೆ. ತನ್ನನ್ನು ಚಿತ್ರನಟಿ ಮಾಡುವುದಾಗಿ ಹೇಳಿ ನಿರ್ದೇಶಕ ಸುಳ್ಳು ಭರವಸೆ ನೀಡಿ ಶೋಷಣೆ ಮಾಡಿದ್ದಾರೆ ಎಂದು ಯುವತಿ ದೆಹಲಿ ಪೊಲೀಸರಿಗೆ ದೂರು ನೀಡಿ ‘ಅಪರ್ಣಾ ಅವರು ಇವತ್ತು..ನಾಳೆ ಎನ್ನುವುದು ನಮಗೆ ಮೊದಲೇ ಗೊತ್ತಿತ್ತು’
ಮಹಾಕುಂಭಮೇಳದ ವೈರಲ್ ಸೆನ್ಸೇಷನ್ ಮೊನಾಲಿಸಾಗೆ ಚಲನಚಿತ್ರ ಪಾತ್ರವನ್ನು ನೀಡುವ ಆಫರ್ ನೀಡಿದ್ದ ಚಲನಚಿತ್ರ ನಿರ್ಮಾಪಕ ಸನೋಜ್ ಮಿಶ್ರಾ ಅವರನ್ನು ಸೋಮವಾರ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ದೆಹಲಿ ಹೈಕೋರ್ಟ್‌ಗೆ ಸನೋಜ್ ಮಿಶ್ರಾ ಜಾಮೀನು ಅರ್ಜಿ ಹಾಕಿದ್ದರು. ಅದರೆ ಆ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ್ದು ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.
ಸನೋಜ್ ಮಿಶ್ರಾ ನಟಿಯಾಗಲು ಆಕಾಂಕ್ಷಿಯಾಗಿದ್ದ ಸಣ್ಣ ಪಟ್ಟಣದ ಯುವತಿ ಮೊನಾಲಿಸಾಳನ್ನು ಕರೆಸಿ ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ವತ: ಮೊನಾಲಿಸಾ ನಬಿ ಕರೀಮ್ ಪೊಲೀಸರಿಗೆ ದೂರನ್ನು ನೀಡಿದ್ದಾಳೆ. ಇದೀಗ ಈ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮೊನಾಲಿಸಾಳಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ
ಮೊನಾಲಿಸಾ ದೂರಿನ ಪ್ರಕಾರ, ಆಕೆ ಮೊದಲು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ಮಾಡುವಾಗ ಸನೋಜ್ ಮಿಶ್ರಾ ಆಕೆಯನ್ನು ಸಂಪರ್ಕಿಸಿದರು. ಅವರು ನಿರಂತರವಾಗಿ ಆಕೆಯೊಂದಿಗೆ ದೂರವಾಣಿಯಲ್ಲಿ ಸಂಪರ್ಕದಲ್ಲಿದ್ದರು. ನಂತರ ಸನೋಜ್ ಮಿಶ್ರಾ ಅವರು ಝಾನ್ಸಿ ರೈಲ್ವೆ ನಿಲ್ದಾಣಕ್ಕೆ ಬಂದಿರುವುದಾಗಿ ಮೊನಾಲಿಸಾಳಿಗೆ ಕರೆ ಮಾಡಿದ್ದಾರೆ. ಜೊತೆಗೆ ಭೇಟಿ ಮಾಡಲು ಕೂಡ ಬಲವಂತ ಮಾಡಿದ್ದಾರೆ. ಆದರೆ ಮೊನಾಲಿಸಾ ಜನ ಜಮಾಯಿಸುವ ಕಾರಣಕ್ಕೆ ಭೇಟಿಗೆ ನಿರಾಕರಿಸಿದ್ದಾಳೆ. ಆದರೂ ಕೂಡ ಸನೋಜ್ ಮಿಶ್ರಾ ಭೇಟಿಯಾಗದೇ ಇದ್ದಲ್ಲಿ ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಸಿದ್ದಾರೆ. ಹೀಗಾಗಿ ಭಯವಾಗಿ ನಾನು ಅವರನ್ನು ಭೇಟಿ ಮಾಡಿದೆ ಎಂದು ಮೊನಾಲಿಸಾ ದೂರಿನಲ್ಲಿ ತಿಳಿಸಿದ್ದಾರೆ.
ಭೇಟಿಯಾದ ಬಳಿಕ ರೆಸಾರ್ಟ್‌ಗೆ ಕರೆದೊಯ್ದ ಸನೋಜ್ ಮಿಶ್ರಾ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಮೊನಾಲಿಸಾ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ತನ್ನ ಖಾಸಗಿ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿ, ಮದುವೆಯಾಗುವುದಾಗಿ ಭರವಸೆ ಕೂಡ ನೀಡಿದ್ದಾನೆ ಎಂದು ದೂರಿನಲ್ಲಿ ಮೊನಾಲಿಸ ತಿಳಿಸಿದ್ದಾಳೆ. ಜೊತೆಗೆ ಆಕೆಯ ಮೇಲೆ ನಿಯಂತ್ರಣ ಸಾಧಿಸಲು ಆತ ಆಕೆಗೆ ಚಲನಚಿತ್ರಗಳಲ್ಲಿ ಪಾತ್ರಗಳ ಭರವಸೆ ನೀಡಿದ್ದಾನೆ ಎಂದು ನೊಂದ ಹುಡುಗಿ ಆರೋಪಿಸಿದ್ದಾಳೆ.