Published
2 days agoon
By
Akkare Newsಬಂಟ್ವಾಳ: ತಾಲೂಕಿನ ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಭೂಕೈಲಾಸ ಪ್ರತೀತಿಯ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕಾವಳಪಡೂರು ಗ್ರಾ.ಪಂ.ಸದಸ್ಯ ವೀರೇಂದ್ರ ಕುಮಾರ್ ಅಮೀನ್ ಅವರು ಆಯ್ಕೆಯಾಗಿದ್ದಾರೆ.
ದೇಗುಲದ ಕಚೇರಿಯಲ್ಲಿ ಆಡಳಿತಾಧಿಕಾರಿ ಸಚಿನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವ್ಯವಸ್ಥಾಪನ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಅರ್ಚಕರಾಗಿ ಮಿಥುನ್ ರಾಜ್ ನಾವಡ, ಸಮಿತಿಯ ಸದಸ್ಯರಾಗಿ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮಿ ಸಿ.ಬಂಗೇರ,ಎಂ.ಉದಯ ನಾಯಕ್, ಪ್ರೇಮನಾಥ, ಜನಾರ್ದನ ಆಚಾರ್ಯ, ದಯಾನಂದ ಶೆಟ್ಟಿ ಅಮೈ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದೇಗುಲದ ಆಡಳಿತವನ್ನು ಆಡಳಿತಾಧಿಕಾರಿ ಅವರು ನೂತನ ಸಮಿತಿಗೆ ಹಸ್ತಾಂತರಿಸಿದರು. ಸಾರ್ವಜನಿಕರ ಪರವಾಗಿ ನೂತನ ಸಮಿತಿಯನ್ನು ಅಭಿನಂದಿಸಲಾಯಿತು.
ಪ್ರಮುಖರಾದ ಜಿ.ಪಂ.ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಬಾಲಕೃಷ್ಣ ಆಚಾರ್ಯ, ಪ್ರಭಾಕರ ಆಚಾರ್ಯ, ಬಾಲಕೃಷ್ಣ ಅಂಚನ್, ವಿಶ್ವನಾಥ ಪೂಜಾರಿ ಪೀರ್ಯಗುತ್ತು, ಸತೀಶ್ ಪಡಂತ್ರ್ಯಬೆಟ್ಟು, ರಾಜ್ ಪ್ರಸಾದ್ ಆರಿಗ, ಗೋಪಾಲ ಶೆಟ್ಟಿ ಕೆದ್ದಳಿಕೆ, ಕುಶಲ್ ಶೆಟ್ಟಿ ಕೆದ್ದಳಿಕೆ, ದಾಮೋದರ ಮನ್ಯಗುತ್ತು, ಉಮೇಶ್ ಪಡ್ಪು, ಲಿಂಗಪ್ಪ ಪೂಜಾರಿ ಕರ್ಮಾರ್, ದೇವಸ್ಥಾನದ ಮೆನೇಜರ್ ವಿನಯ ಕುಮಾರ್ ಮತ್ತು ಸಿಬಂದಿವರ್ಗ, ಮತ್ತಿತರರು ಉಪಸ್ಥಿತರಿದ್ದರು.