Published
1 day agoon
By
Akkare Newsಉಪ್ಪಿನಂಗಡಿ: 34 ನೆಕ್ಕಿಲಾಡಿಯ ನಾಲ್ಕು ಮನೆಗಳಿಗೆ ನಿನ್ನೆ ರಾತ್ರಿ(ಏ.2) ಕಳ್ಳರು ನುಗ್ಗಿದ ಘಟನೆ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.
ಇಲ್ಲಿನ ನವಾಝ್, ಮಹಮ್ಮದ್ ಕೆ.ವಿ. , ಮುಹಮ್ಮದ್ ಸಿರಾಜ್ ಹಾಗೂ 34 ನೆಕ್ಕಿಲಾಡಿ ಗ್ರಾ.ಪಂ.ಸದಸ್ಯೆ ರತ್ನಾವತಿ ಅವರ ಮನೆಗೆ ಕಳ್ಳರು ನುಗ್ಗಿದ್ದು, ಕಪಾಟುಗಳಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಾರೆ.
ನಾಲ್ಕು ಮನೆಗಳಲ್ಲಿಯೂ ಬುಧವಾರ ರಾತ್ರಿ ಯಾರೂ ಇರದ್ದನ್ನು ಗಮನಿಸಿದ ಕಳ್ಳರು ಈ ಕೃತ್ಯವೆಸಗಿದ್ದಾರೆ.
ಉಪ್ಪಿನಂಗಡಿ ಪೊಲೀಸರು, ಮಂಗಳೂರಿಂದ ಶ್ವಾನ ದಳ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ.