Published
2 days agoon
By
Akkare Newsಭಾರತದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಮಿತ್ರ ವಿಭೂಷಣ’ ಪಡೆದಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಪ್ರಧಾನಿ ಮೋದಿಗೆ ಈ ಪದಕವನ್ನು ಹಾಕಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನೀಡಲಾದ ಈ ಗೌರವವು ಶ್ರೀಲಂಕಾ ಮತ್ತು ಇತರ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸಲು ಅವರು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸುತ್ತದೆ. ಈ ಗೌರವವು ನನ್ನ ಗೌರವ ಮಾತ್ರವಲ್ಲ, 140 ಕೋಟಿ ಭಾರತೀಯರ ಗೌರವ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊಲಂಬೋ, ಏಪ್ರಿಲ್ 5: ಶ್ರೀಲಂಕಾದ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಮಿತ್ರ ವಿಭೂಷಣ’ ಪದಕವನ್ನು ನೀಡಲಾಯಿತು. ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಇಂದು ಪ್ರಧಾನಿ ಮೋದಿ ಅವರಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’ ಪದಕವನ್ನು ನೀಡಿದ್ದಾರೆ. ಈ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಪ್ರಧಾನಿ ಮೋದಿ ಅವರು ಶ್ರೀಲಂಕಾದ ಅಧ್ಯಕ್ಷ ದಿಸಾನಾಯಕೆಗೆ ಧನ್ಯವಾದ ಹೇಳಿದ್ದು, ಈ ಗೌರವವನ್ನು 140 ಕೋಟಿ ಭಾರತೀಯರಿಗೆ ಅರ್ಪಿಸಿದ್ದಾರೆ. “ಇದು ಶ್ರೀಲಂಕಾ ಮತ್ತು ಭಾರತದ ಜನರ ನಡುವಿನ ಐತಿಹಾಸಿಕ ಸಂಬಂಧ ಮತ್ತು ಆಳವಾದ ಸ್ನೇಹವನ್ನು ತೋರಿಸುತ್ತದೆ. ಈ ಗೌರವಕ್ಕಾಗಿ ನಾನು ಶ್ರೀಲಂಕಾ ಅಧ್ಯಕ್ಷರು, ಶ್ರೀಲಂಕಾ ಸರ್ಕಾರ ಮತ್ತು ಶ್ರೀಲಂಕಾದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಲಂಕಾ ಭೇಟಿಯ ಸಂದರ್ಭದಲ್ಲಿ ‘ಮಿತ್ರ ವಿಭೂಷಣ’ ಪದಕವನ್ನು ನೀಡಲಾಯಿತು. ಇದು ವಿದೇಶಿ ರಾಷ್ಟ್ರವೊಂದು ಪ್ರಧಾನಿ ಮೋದಿಗೆ ನೀಡಿದ 22ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು, ಎರಡೂ ದೇಶಗಳ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿ ಅವರ ಅಸಾಧಾರಣ ಪ್ರಯತ್ನಗಳಿಗಾಗಿ ಈ ಗೌರವವನ್ನು ನೀಡಲಾಗಿದೆ.