Published
1 day agoon
By
Akkare Newsವಿಟ್ಲ: ಸಮರ್ಪಣ್ ವಿಟ್ಲ ಸಂಘಟನೆಯ ಸೇವಾ ಪ್ರಕಲ್ಪದಲ್ಲಿ ವಿಟ್ಲ ಕಸಬಾ ಗ್ರಾಮದ ಇರಂದೂರು ಎಂಬಲ್ಲಿ ಅರ್ಹ ಫಲಾನುಭವಿ ಕುಟುಂಬಕ್ಕೆ ನಿರ್ಮಿಸಿದ ಮನೆ ಸಮರ್ಪಣ್ ನಿಲಯ ದ
ಗೃಹಪ್ರವೇಶ 06-04-2025 ಭಾನುವಾರ ಬೆಳಿಗ್ಗೆ 7.30 ಕ್ಕೆ ಶ್ರೀ ರಾಜೇಶ್ ಭಟ್ ಇವರ ಪೌರೋಹಿತ್ಯ ದೊಂದಿಗೆ ಗಣಪತಿ ಹವನ ಹಾಗೂ ಹಾಲುಕ್ಕಿಸುವುದರೊಂದಿಗೆ ನಡೆಯಿತು.
ಈ ಸಂದರ್ಭ ಮನೆ ನಿರ್ಮಾಣದಲ್ಲಿ ಸಹಕರಿಸಿದ ಮಹನೀಯರಾದ ಶ್ರೀ ಧನಂಜಯ ನೆಕ್ಕರೆ ಕಾಡು, ರವಿ ಅಂಚನ್ , ಕೀರ್ತನ್ ಸಣ್ಣಗುತ್ತು , ತೀರ್ಥೆಶ್, ಮಹೇಶ್ , ಮೊದಲಾದವರನ್ನು ಸಮರ್ಪಣ್ ವಿಟ್ಲ ಇದರ ಅಧ್ಯಕ್ಷರಾದ ಶ್ರೀ ಯಶವಂತ್ ಯನ್ ಹಾಗೂ ಗೌರವಾಧ್ಯಕ್ಷ ರಾದ ಶ್ರೀ ಕೃಷ್ಣಯ್ಯ ವಿಟ್ಲ ಅರಮನೆ ಇವರು ಗೌರವಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮರ್ಪಣ್ ವಿಟ್ಲ ಇದರ ಉಪಾಧ್ಯಕ್ಷರಾದ ರವಿವರ್ಮ ವಿಟ್ಲ ಅರಮನೆ, ಯಾದವ ಮಡಿವಾಳಕೋಡಿ , ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಕಾರ್ಯದರ್ಶಿ ರೋಹಿತ್ ಕಟ್ಟೆ, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಪವನ್ ಕಟ್ಟೆ, ಗೌರವ ಸಲಹೆಗಾರ ವಿಶ್ವನಾಥ್ ನಾಯ್ತೊಟ್ಟು,ಸಂಚಾಲಕರಾದ ಹರೀಶ್ .ಕೆ ವಿಟ್ಲ, ಹಾಗೂ ನವಚೇತನ ಗೆಳೆಯರು ಬಳಗ ಇರಂದೂರು ಪಡೀಲ್ , ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ( ರಿ ) ಮಾಮೇಶ್ವರ ಇದರ ಅಧ್ಯಕ್ಷರು ಶ್ರೀ ವೀರಪ್ಪಗೌಡ ರಾಯರ ಬೆಟ್ಟು , ಬಂಟ್ವಾಳ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷರಾದ ಶ್ರೀ ಡಾ. ಸಿ ಕೆ ಗೌಡ , ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ಮೋಹನ್ ಇಂದ್ರಪಡ್ಪು , ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀ ಕರುಣಾಕರ ನಾಯ್ತೊಟ್ಟು, ಮಾಜಿ ಯೋಧರುಗಳಾದ ಶ್ರೀ ಬಾಲಕೃಷ್ಣ ಪೊನ್ನೆತ್ತಡಿ , ಶ್ರೀ ಕುಶಾಲಪ್ಪ ನಾಯ್ತೊಟ್ಟು, ವಿಟ್ಲ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಹರೀಶ್ ಕಟ್ಟೆ , ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಮೋನಪ್ಪಗೌಡ ರಾಯರ ಬೆಟ್ಟು , ಶ್ರೀ ರವಿ ಅಂಚನ್ ಮಾಡ್ತೇಲು, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಶಶಿಧರ ಗೌಡ ಕೈಂತಿಲ, ಕಾರ್ಯದರ್ಶಿ ಶ್ರೀ ಸಂಪತ್ ಮಾಮೇಶ್ವರ, ನವ ಚೇತನ ಗೆಳೆಯರ ಬಳಗ ಪಡೀಲ್ ಇದರ ಅಧ್ಯಕ್ಷರಾದ ಶ್ರೀ ಚರಣ್ ಪಡೀಲ್ ಮಾಜಿ ಅಧ್ಯಕ್ಷರಾದ ಶ್ರೀ ಅಶೋಕ್ ಪಡೀಲ್ , ಶ್ರೀ ತೀರ್ಥೇಶ್ ಇರಂದೂರು, ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಸಂಚಾಲಕರಾದ ಶ್ರೀ ಪ್ರಶಾಂತ್ ಅಡ್ಡಾಳಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ರಹಿಮಾನ್ ನವಗ್ರಾಮ, ಶ್ರೀ ಶರಣಂ ಕನ್ಸ್ಟ್ರಕ್ಷನ್ ಇರಂದೂರು ಮಾಲಕರಾದ ಶ್ರೀ ಮೋಹನ್ ಚಂದ್ರ ಇರಂದೂರು, ವಿಟ್ಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಜಲಜಾಕ್ಷಿ ಪೊನ್ನೆತ್ತಡಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ ಕಲ್ಯಾಣಿ ವೀರಪ್ಪಗೌಡ ರಾಯರ ಬೆಟ್ಟು ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್( ರಿ.) ಇರಂದೂರು, ತ್ರಿಶೂಲ್ ಫ್ರೆಂಡ್ಸ್ ಮಾಮೇಶ್ವರ ಇದರ ಪ್ರಮುಖರು ಉಪಸ್ಥಿತರಿದ್ದು ಗ್ರಾಮದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟ ಸಮರ್ಪಣ್ ವಿಟ್ಲ ಸಂಘಟನೆಗೆ ಕೃತಜ್ಞತೆ ಸಲ್ಲಿಸಿ ಅಧ್ಯಕ್ಷ ರಾದ ಶ್ರೀ ಯಶವಂತ್ ಯನ್ ಹಾಗೂ ಗೌರವಾಧ್ಯಕ್ಷ ರಾದ ಶ್ರೀ ಕೃಷ್ಣಯ್ಯ ವಿಟ್ಲ ಅರಮನೆ ಇವರನ್ನು ಗೌರವಿಸಿ ಸನ್ಮಾನಿಸಿದರು.