Published
6 hours agoon
By
Akkare Newsಸುಳ್ಯ: ಕಾರಿನ ಮೇಲೆ ಹಾಗೂ ನಾಲ್ಕು ಬಾಗಿಲುಗಳ ಮೂಲಕ ಹೊರಗೆ ನೇತಾಡಿಕೊಂಡು ಹುಚ್ಚಾಟ ಮೆರೆದ ಯುವಕರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎ. 5ರಂದು ಸಂಜೆ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಪರಿಸರದಲ್ಲಿ ಸಂಪಾಜೆ ಕಡೆಯಿಂದ 3.45ರ ವೇಳೆಗೆ ಸುಳ್ಯ ಕಡೆಗೆ ಕೆಎ 09 ಎಂಜಿ 5880 ನಂಬರ್‌ನ ಕಾರಿನಲ್ಲಿ ಐವರು ಸಾರ್ವಜನಿಕ ಭಂಗವನ್ನುಂಟು ಮಾಡುತ್ತಾ ಬೊಬ್ಬೆ ಹೊಡೆಯುತ್ತಾ ದಾಂಧಲೆ ಮಾಡಿಕೊಂಡು ಹೋಗುತ್ತಿದ್ದರು. ಇದರ ವೀಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ ಸುಳ್ಯ ಪೊಲೀಸರು ಅಲರ್ಟ್ ಆಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಬಿಎನ್‌ಎಸ್ 281 ಮತ್ತು 184 ಈಎಂವಿ ಆಕ್ಟ್‌ನಂತೆ ಪ್ರಕರಣ ದಾಖಲಾಗಿದೆ.