Published
7 hours agoon
By
Akkare Newsಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಒಡೆತನಕ್ಕೆ ಸೇರಿದ್ದ 29 ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರ ವೈದ್ಯ ಕೆ. ಶೀನಪ್ಪ ಶೆಟ್ಟಿ ಅವರ ಆಶಯದಂತೆ ಅವರ ಮಕ್ಕಳು ಭೂಮಿಯನ್ನು ದೇವಾಲಯಕ್ಕೆ ಹಿಂದಿರುಗಿಸಿದ್ದು, ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ದೇವಾಲಯದ ಅಭಿವೃದ್ಧಿಗೆ ಭಕ್ತ ಜನತೆಯ ಸಹಕಾರ ಯಾವ ರೀತಿ ದೊರಕಬೇಕೆನ್ನುವುದನ್ನು ವೈದ್ಯ ಕೆ. ಎಸ್. ಶೆಟ್ಟಿ ಅವರ ಮಕ್ಕಳು ಕಾರ್ಯ ರೂಪದಲ್ಲಿ ತೋರಿಸಿದ್ದಾರೆ.
ಪೇಟೆಯ ಹೃದಯಭಾಗದಲ್ಲಿರುವ ಬೆಲೆಬಾಳುವ ಭೂಮಿಯನ್ನು ಯಾವುದೇ ಬೇಡಿಕೆ ಮುಂದಿರಿಸದೆ ಸ್ವ ಇಚ್ಛೆಯಿಂದ ದೇವಾಲಯಕ್ಕೆ ಹಿಂದಿರುಗಿಸುವ ಮೂಲಕ ಮಾದರಿಯಾಗಿದ್ದಾರೆ. ಬಾಕಿ ಉಳಿದಿರುವ 4 ಸೆಂಟ್ಸ್ ಭೂಮಿಯ ಅನುಭೋಗದಾರರಲ್ಲಿಯೂ ಭೂಮಿ ಮರಳಿಸುವಂತೆ ವಿನಂತಿಸಲಾಗಿದೆ. ಅವರೂ ಭೂಮಿ ಹಿಂದಿರುಗಿಸುವ ವಿಶ್ವಾಸವಿದೆ ಎಂದರು. ಪುತ್ತೂರಿನ ಮಹಾಲಿಂಗೇಶ್ವರ ದೇವರ 15 ಎಕ್ರೆ ಭೂಮಿಯ ಅನುಭೋಗದಾರರಲ್ಲೂ ದೇವಾಲಯಕ್ಕೆ ಹಿಂದಿರುಗಿಸಲು ಮನವಿ ಮಾಡಲಾಗಿದೆ. ಆ ಎಲ್ಲ ಭೂಮಿಯ ಸ್ವಾಧೀನ ಪ್ರಕ್ರಿಯೆಯೂ ನಡೆಯಲಿದೆ ಎಂದರು.