Published
2 days agoon
By
Akkare Newsಪುತ್ತೂರು: ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ ಲೋಗೊದೊಂದಿಗೆ ಜನರ ಮುಂದೆ ಬರುತ್ತಿದೆ. ಮುಳಿಯ ಇನ್ನು ಮುಂದೆ ‘ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ನೀಡುವ ಧೈಯ ವಾಕ್ಯದೊಂದಿಗೆ ಬಂದಿದೆ. “ಇದೇ ತಿಂಗಳು ಹೊಚ್ಚ ಹೊಸತನದೊಂದಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಎಂದು ಮರು ನಾಮಕರಣಗೊಳ್ಳಲಿದೆ. ಈ ಸಂಬಂಧ ಜನಪ್ರಿಯ ನಟ ರಮೇಶ್ ಅರವಿಂದ್ ಮುಳಿಯದ ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯದ ವಿಶೇಷ. ಈ ಹೊಸ ಲೋಗೋ ಆಧುನಿಕತೆಯೊಂದಿಗೆ ಡಿಸೈನ್ ಎಲಿಮೆಂಟ್ ಹೊಂದಿದ್ದು, ಹೊಸ ಟ್ರೆಂಡ್ ಗಳನ್ನು ನೀಡುತ್ತಿದೆ. ನಂಬಿಕೆ ಮತ್ತು ಪರಂಪರೆಯ ಜೊತೆಗೆ ಹೊಸತನದ ವಿಚಾರಗಳನ್ನು ಮುಂದಿಡುತ್ತದೆ” ಶುದ್ಧತೆ ಮೀರಿದ ಪರಿಪೂರ್ಣತೆಯೆಡೆಗೆ ಸಾಗಿ ಬಂದು ಮುಳಿಯ ತನ್ನ ಸುತ್ತಮುತ್ತ ಸಂತೋಷ ಉಣ ಬಡಿಸಿದೆ ಎಂದರು.
ಕೃಷ್ಣ ನಾರಾಯಣ ಮುಳಿಯ ಮಾತನಾಡಿ, “ಕಳೆದ ಮೂರು ತಲೆಮಾರುಗಳಿಂದ ನಾವು ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ ಉಳಿಸುತ್ತಿರುವುದು ನಮ್ಮ ಮುಳಿಯ ಪರಂಪರೆ. ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ,ಸಂತೋಷ ನೀಡಿದ್ದೇವೆ. ನಿಮಗೆ ಮನಸಾರೆ ಸಂತೋಷ ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ” ಎಂದರು.
.
ಲೋಗೋದ ವಿನ್ಯಾಸದ ಕುರಿತು ವಿವರಿಸಿದ ಮುಳಿಯ ಸಂಸ್ಥೆಯ ಬ್ರಾಂಡ್ ಮತ್ತು ಮಾರ್ಕೆಟಿಂಗ್ ಕನ್ಸಲ್ವೆಂಟ್ ವೇಣು ಶರ್ಮ “ಈ ಹೊಸ ಲೋಗೋವನ್ನು ಪುತ್ತೂರಿನ ಸಾಫ್ಟ್ರ್ ಕಂಪನಿಯಾದ” ದ ವೆಬ್ ಪೀಪಲ್ ನಿರ್ಮಿಸಿದ್ದಾರೆ ಎಂದರು. ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂಜೀವ್ ಹಾಗೂ ‘ದ ವೆಬ್ ಪೀಪಲ್’ ಆದಿತ್ಯ ಕಲ್ಲುರಾಯ ಮತ್ತು ಶರತ್ ರವರು ಉಪಸ್ಥಿತರಿದ್ದರು.