Connect with us

ಇತರ

ರಾಜ್ಯ ಸರಕಾರಕ್ಕೆ ಶಾಕ್ ಕೊಟ್ಟ ಮಧ್ಯಪ್ರಿಯರು! ವಿಪರೀತ ಮಧ್ಯದ ಬೆಲೆ ಏರಿಕೆ.. ಸರಕಾರದ ಲೆಕ್ಕಾ ಉಲ್ಟಾ ಪಲ್ಟಾ!!

Published

on

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮಧ್ಯದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಮಾಡುತ್ತಾಲೇ ಬರುತ್ತಿದೆ. ಎಷ್ಟೇ ಬೆಲೆ ಏರಿಕೆ ಮಾಡಿದರು ಕೂಡ ಮಧ್ಯಪ್ರಿಯರು ಮಧ್ಯವನ್ನು ಖರೀದಿಸುತ್ತಾರೆ ಎಂಬ ಒಂದು ನಂಬಿಕೆಯಿಂದ ಸರ್ಕಾರ ಈ ರೀತಿಯ ನಡೆಯನ್ನು ಪ್ರದರ್ಶಿಸುತ್ತಿದೆ. ಆದರೆ ಇದೀಗ ಸರ್ಕಾರಕ್ಕೆ ಮಧ್ಯಪ್ರಿಯರೇ ಶಾಕ್ ಕೊಟ್ಟು, ಅಘಾತವನ್ನು ಉಂಟು ಮಾಡಿದ್ದಾರೆ.

ಹೌದು ನಿರಂತರವಾಗಿ ಮಧ್ಯದ ಬೆಲೆಯನ್ನು ಏರಿಸುತ್ತಿರುವ ಸರ್ಕಾರದ ಲೆಕ್ಕಾಚಾರ ಇದೀಗ ತಲೆಕೆಳಗಾಗಿದೆ. ಏಕೆಂದರೆ ಕುಡುಕರು ಇದೀಗ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ಇನ್ನು ಮುಂದೆ ಸರ್ಕಾರ ಮಧ್ಯದ ಬೆಲೆಯನ್ನು ಏರಿಸುವಾಗ ಕೊಂಚ ಯೋಚನೆ ಮಾಡುವ ಪರಿಸ್ಥಿತಿ ಬಂದು ಒದಗಿದೆ.

ಅದೇನೆಂದರೆ ಮದ್ಯ ಬೆಲೆಯ ಏರಿಕೆಯಿಂದಾಗಿಕಳೆದ ಎರಡು ವರ್ಷಗಳಿಂದಲೂ ಅಬಕಾರಿ ಇಲಾಖೆಗೆ ಟಾರ್ಗೆಟ್‌ ರೀಚ್ ಆಗುವುದಕ್ಕೆ ಆಗುತ್ತಿಲ್ಲ. 2024 – 2025ನೇ ಸಾಲಿನಲ್ಲೂ ಸರ್ಕಾರಕ್ಕೆ ಮದ್ಯದಿಂದ ನಿರೀಕ್ಷಿತ ಆದಾಯ ಬಂದಿಲ್ಲ. ಬರೋಬ್ಬರಿ 2,995 ಕೋಟಿ ರೂ ಸಂಗ್ರಹದಲ್ಲಿ ಖೋತಾ ಆಗಿದೆ ಎಂದು ಹೇಳಲಾಗಿದೆ. ಇದು ಸರ್ಕಾರಕ್ಕೆ ಮದ್ಯ ಪ್ರಿಯರು ಕೊಟ್ಟಿರುವ ಭರ್ಜರಿ ಶಾಕ್‌. ಮದ್ಯ ಮಾರಾಟ ಪ್ರಮಾಣ ತುಸು ಹೆಚ್ಚಳವಾಗಿದೆ. ಆದರೆ, ಸರ್ಕಾರಕ್ಕೆ ಹೆಚ್ಚಾಗಿ ಆದಾಯ ಬರುತ್ತಿದ್ದ ಬಿಯರ್‌ ಮಾರಾಟವೇ ಕುಸಿತ ಕಂಡಿದೆ.


.

ಸರ್ಕಾರವು ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಅಂದರೆ 18 ತಿಂಗಳ ಅವಧಿಯಲ್ಲಿ ಬರೋಬ್ಬರಿ ಮೂರು ಬಾರಿ ಬಿಯರ್‌ ಮಾರಾಟ ಬೆಲೆಯನ್ನು ಹೆಚ್ಚಳ ಮಾಡಿತ್ತು. ಇದರಿಂದ ಬಿಯರ್‌ ಮಾರಾಟವು ಭಾರೀ ಕುಸಿತ ಕಂಡಿದ್ದು. ಲಾಭದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಆಘಾತ ಎದುರಾಗಿದೆ. ಬಿಯರ್‌ ಮಾರಾಟ ಕುಸಿತ ಕಾಣುವುದಕ್ಕೆ ರಾಜ್ಯ ಸರ್ಕಾರವು ಬಿಯರ್‌ ಬೆಲೆಯನ್ನು ನಿರಂತರವಾಗಿ ಹೆಚ್ಚಿಸಿದ್ದೇ ಕಾರಣ ಅಂತ ಹೇಳಲಾಗಿದೆ. 2023 -2024ನೇ ಸಾಲಿಗೆ ಹೋಲಿಕೆ ಮಾಡಿದರೆ, 2024 – 2025ರ ಮಾರ್ಚ್‌ ಅವಧಿಯವರೆಗೆ ಬಿಯರ್‌ ಮಾರಾಟ ಕುಸಿತ ಕಂಡಿದೆ. ಬೆಲೆ ಏರಿಕೆ ಮಾಡಿ ಅಬಕಾರಿ ಆದಾಯದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯ ಪ್ರಿಯರು ಸೆಡ್ಡು ಹೊಡೆದಿದ್ದಾರೆ.

 

ಈ ರೀತಿ ಇರುವಾಗಲೇ ಬಿಯರ್‌ ಮಾರಾಟ ಕಂಪನಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು. ದಯವಿಟ್ಟು ಯಾವುದೇ ಕಾರಣಕ್ಕೂ ಮದ್ಯದ ಮೇಲೆ ಅದರಲ್ಲೂ ಮುಖ್ಯವಾಗಿ ಬಿಯರ್‌ ಬೆಲೆ ಏರಿಕೆ ಮಾಡಬೇಡಿ ಎಂದು ಪತ್ರ ಬರೆದಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement