Published
6 hours agoon
By
Akkare Newsಎಪ್ರಿಲ್ 15: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ವಕ್ಪ್ ಬಿಲ್ ಕರ್ನಾಟಕದಲ್ಲಿ ಜಾರಿಯಾಗುವುದಿಲ್ಲ, ಧಾರ್ಮಿಕ ಮುಖಂಡರುಗಳ ಜೊತೆ ಚರ್ಚೆ ಮಾಡದೆ ಬಿಲ್ ಪಾಸ್ ಮಾಡಿರುವುದು ಖಂಡನೀಯ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ವಕ್ಪ್ ನಮ್ಮ ರಾಜ್ಯದಲ್ಲಿ ಅನುಷ್ಠಾನ ಆಗುವ ಪ್ರಶ್ನೆಯೇ ಇಲ್ಲ, ಹಲವು ಸಂಘಟನೆಗಳು ಈಗಾಗಲೇ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯದಲ್ಲಿ ಜಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.