Published
6 hours agoon
By
Akkare Newsಪುತ್ತೂರು: ಕೂರ್ನಡ್ಕ ನಿವಾಸಿ ಚಾರ್ಲಿ ರೆಬೆಲ್ಲೋರವರ ಪುತ್ರ ಪಿಗ್ನಿ ಸಂಗ್ರಹಕ ವಿಜಯ್ ರೆಬೆಲ್ಲೋ (45) ರವರು ಮಂಗಳವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ ಮಲಗಿದ್ದವರು, ಮಂಗಳವಾರ ಬೆಳಿಗ್ಗೆ ಎದ್ದಿಲ್ಲ. ಪಿಗ್ಗಿ ಸಂಗ್ರಹಕ್ಕೆ ವಿಜಯ್ ಬಂದಿಲ್ಲ ಎಂದು ಗ್ರಾಹಕರು ಕರೆ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿಲ್ಲ.
ಬಳಿಕ ಮನೆ ಮಾಲಕರಿಗೆ ಕರೆ ಮಾಡಿ ವಿಚಾರಿಸಿದರು. ಅವರು ಮನೆ ಬಳಿ ಹೋಗಿ ನೋಡಿದಾಗ, ವಿಜಯ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ವಿಜಯ್ ಅವರು ಅವಿವಾಹಿತರಾಗಿದ್ದು, ಮುಕೈಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಅವರ ಸಾವಿಗೆ ಕಾರಣ ತಿಳಿದುಬಂದಿಲ್ಲ.