Connect with us

ಇತ್ತೀಚಿನ ಸುದ್ದಿಗಳು

ಎ.20: ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಆರಂಭೋತ್ಸವ: ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೃಹತ್‌ ಚಿನ್ನದ ಮಳಿಗೆ

Published

on

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬೃಹತ್‌ ಆಭರಣ ಮಳಿಗೆ ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ನವೀಕೃತ ಮಳಿಗೆ ಎ. 20ರಂದು ಉದ್ಘಾಟನೆಗೊಳ್ಳಲಿದೆ.

ಕೋರ್ಟ್‌ ರಸ್ತೆಯಲ್ಲಿನ ಮಳಿಗೆ ಯನ್ನು ಅಂದು ಬೆಳಗ್ಗೆ 10ಕ್ಕೆ ನಟ, ಮುಳಿಯ ಸಂಸ್ಥೆಯ ನೂತನ ಬ್ರ್ಯಾಂಡ್ ಅಂಬಾಸಿಡರ್‌ ಆದ ರಮೇಶ್‌ ಅರ ವಿಂದ್‌ ಉದ್ಘಾಟಿಸುವರು ಎಂದು ಸಂಸ್ಥೆಯ ಆಡಳಿತ ಮುಖ್ಯಸ್ಥ ಕೇಶವ ಪ್ರಸಾದ್‌ ಮುಳಿಯ ತಿಳಿಸಿದ್ದಾರೆ.

ಮಹಾಲಿಂಗೇಶ್ವರ ದೇವಾಲಯದ ಬಳಿಯಿಂದ ತೆರೆದ ವಾಹನದಲ್ಲಿ ದೇವರ ದೀಪದೊಂದಿಗೆ ರಮೇಶ್‌ ಅರವಿಂದ ಅವರು ಮುಳಿಯ ಶೋರೂಂಗೆ ಬಂದು ಉದ್ಘಾಟಿಸುವರು. ಈ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.

1944 ರಲ್ಲಿ ಪ್ರಾರಂಭಗೊಂಡ ಮುಳಿಯ ಜ್ಯುವೆಲ್ಸ್‌ ಚಿನ್ನಾಭರಣದ ಬ್ರ್ಯಾಂಡ್ ಆಗದೆ ಗ್ರಾಹಕರ ಹಬ್ಬ, ಸಂಭ್ರಮ, ಅಮೂಲ್ಯ ಕ್ಷಣಗಳ ಭಾಗ ವಾಗಿ ಬೆಳೆದಿದೆ. ಹೊಸ ಪೀಳಿಗೆಗೆ ತಕ್ಕಂತೆ ಶೋರೋಂಗಳನ್ನು ನವೀಕರಿಸಿದ್ದು ಹೊಸ ಸಂಗ್ರಹ, ನವೀನ ಸೇವಾ ದೃಷ್ಟಿಕೋನಗಳೊಂದಿಗೆ, ಹೊಸ ಲೋಗೋದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ ಎಂದ ಅವರು, 2025 ರಲ್ಲಿ ಬ್ರ್ಯಾಂಡ್ ನವೀಕರಣ ಮತ್ತು ಸಮಗ್ರ ಪುನರ್‌ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಂಡು ಎಲ್ಲ ಶಾಖೆಗಳ ಶೋರೂಂ ನವೀಕರಣ, ಪುತ್ತೂರಿನಲ್ಲಿ 10000 ಚದರ ಅಡಿಯ ವಿಶಾಲ ಶೋರೂಂ ಅನ್ನು ತೆರೆಯಲಾಗಿದೆ.

 

ನಾಲ್ಕು ಅಂತಸ್ತಿ ನಲ್ಲಿ ಚಿನ್ನ, ಬೆಳ್ಳಿ, ವಜ್ರ, ಆಧುನಿಕ ಬ್ರ್ಯಾಂಡೆಡ್‌ ವಾಚುಗಳು, ಗಿಫ್ಟ್ ಐಟಂ, ಚಿನ್ನಾಭರಣಗಳ ಕೌಂಟರ್‌ಗಳನ್ನು ಹೊಂದಿರಲಿವೆ. ಗೋಣಿಕೊಪ್ಪದಲ್ಲಿ ಸ್ವಂತ ಕಟ್ಟಡದಲ್ಲಿ ಶೋರೂಂ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಂಬಂತೆ ಗ್ರಾಹಕರಿಗೆ ಮಳಿಗೆಯಲ್ಲೇ ಉಚಿತ ಊಟ, ಉಪಾಹಾರಗಳನ್ನು ಆರಂಭಿಸಲಾಗಿದೆ.

ಮಧ್ಯಾಹ್ನ 12 ರಿಂದ 2.30 ರ ಒಳಗೆ ಆಭರಣ ಖರೀದಿಗೆ ಬರುವ ಗ್ರಾಹಕರಿಗೆ ಊಟ, ಸಂಜೆ 4 ರಿಂದ 6.30 ರ ಒಳಗೆ ಬರುವವರಿಗೆ ಉಪಾಹಾರ ವ್ಯವಸ್ಥೆ ಇರಲಿದೆ.ಜತೆಗೆ ಮಕ್ಕಳ ಆಟ, ಆರೈಕೆಗೆ ವಿಶೇಷ ಕೊಠಡಿ, ವ್ಯಾಲೆಟ್‌ ಪಾರ್ಕಿಂಗ್‌, ವಾಚ್‌ ಕೌಂಟ ರ್‌, ಬೆಳ್ಳಿಯ ಆಭರಣಗಳ ಸಿಲ್ವರಿ ಯ ಕೌಂಟರ್‌, ವಜ್ರಾಭರಣ ಅಮೂಲ್ಯ ಕೌಂಟರ್‌, ಗೋಲ್ಡ್‌ ಪ್ಯೂರಿಟಿ ಅನಲೈಸರ್‌ ಹಾಗೂ ಡೈಮಂಡ್‌ ಡಿಟೆಕ್ಟರ್‌ ಟೆಸ್ಟಿಂಗ್‌ ಮಿಷನ್‌ ಸೌಲಭ್ಯಗಳಿವೆ ಎಂದರು.

ಲಾಭಾಂಶ ರಹಿತವಾಗಿ ದೈವಾಭರಣ ಲಭ್ಯ
ದೈವ-ದೇವರಿಗೆ ಸಂಬಂಧಿಸಿದ ಆಭರಣಗಳನ್ನು ಲಾಭಾಂಶ ರಹಿತ ದರದಲ್ಲಿ ನೀಡಲಾಗುವುದು. ಅಂದರೆ ತಯಾರಿ ವೆಚ್ಚವನ್ನು ಮಾತ್ರ ತೆಗೆದು ಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಮುಳಿಯ ಆರಂಭೋತ್ಸವದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾರ್ಯಕ್ರಮ ನಡೆಯಲಿದೆ. ಮೇ 22ರಿಂದ ಬೇರೆ ಬೇರೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

 

 

1994 ರಲ್ಲಿ ಮೊದಲ ಹವಾ ನಿಯಂ ತ್ರಿತ ಶೋರೂಮ್‌, 2005 ರಲ್ಲಿ ಶೋ ರೂಂ ವಿಸ್ತರಣೆ,ಐಎಸ್‌ಒ, ಬಿಐ ಎಸ್‌ ಪ್ರಮಾಣೀಕರಣ, 2008ರಲ್ಲಿ ಮಡಿ ಕೇರಿ, 2009ರಲ್ಲಿ ಗೋಣಿಕೊಪ್ಪಲು, 2011ರಲ್ಲಿ ಪುತ್ತೂರಿನಲ್ಲಿ ಅತ್ಯಾಧುನಿಕ ಮಳಿಗೆ, 2011ರಲ್ಲಿ ಬೆಂಗಳೂರಿನಲ್ಲಿ ಶೋರೂಂ, 2013ರಲ್ಲಿ ಮಡಿಕೇರಿಯಲ್ಲಿ ಬೆಳ್ಳಿ ಆಭರಣಗಳ ವಿಶೇಷ ವಿಭಾಗ, 2018ರಲ್ಲಿ ಬೆಳ್ತಂಗಡಿಯಲ್ಲಿ ಬೃಹತ್‌ ಶೋರೂಂ, 2020ರಲ್ಲಿ ಅಮೂಲ್ಯ ಡೈಮಂಡ್‌ ಸಂಗ್ರಹ ಅನಾವರಣ, 2022 ರಲ್ಲಿ ವಿಶೇಷ ಸಿಲ್ವರಿಯಾ ಶೋ ರೂಂ ಆರಂಭವಾಗಿತ್ತು ಎಂದು ವಿವರಿಸಿದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವೇಣು ಶರ್ಮಾ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್‌ ಉಪಸ್ಥಿತರಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement