Published
4 hours agoon
By
Akkare Newsವಿಟ್ಲ ಏ.14.ಸಂವಿಧಾನ ಶಿಲ್ಪಿ, ಮಹಾಮಾನವತಾ ವಾದಿ,ಭಾರತ ರತ್ನ ಡಾ.ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವು ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ರವರ ಅಧ್ಯಕ್ಷತೆಯಲ್ಲಿ ಹಾಗೂ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ರಾಮಣ್ಣ ಪಿಲಿಂಜ ರವರ ನೇತೃತ್ವದಲ್ಲಿ ವಿಟ್ಲ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮಾನಾಥ್ ವಿಟ್ಲ, ದ ಕ ಜಿಲ್ಲಾ ದಲಿತ ಸೇವಾ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರೆಕಾಡು,ಯುವ ಮುಖಂಡ ಪ್ರಹ್ಲಾದ್ ಬೆಳ್ಳಿಪ್ಪಾಡಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕರೀಂ ಕುದ್ದುಪದವು,ಜಿಲ್ಲಾ ST ಘಟಕದ ಉಪಾಧ್ಯಕ್ಷ ಕೇಶವ ನಾಯ್ಕ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಬ್ಲಾಕ್ ಅಧ್ಯಕ್ಷ ರಾದ ಅಬ್ದುಲ್ ರಹಿಮಾನ್,ಹಿರಿಯ ಮುಖಂಡರಾದ ದಿನಕರ ಆಳ್ವ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ ಕೆ ಮುಸಾ,ಗ್ಯಾರಂಟಿ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಸದಸ್ಯ ಅಬ್ಬು ನವಗ್ರಾಮ,ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ, ಅಳಿಕೆ ವಲಯ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ,ಪ್ರಮುಖರಾದ ಶೈಕ್ ಆಲಿ ಸೆರಾಜೆ, ರಶೀದ್ ಡಿ ಎ, ಜನಾರ್ದನ ಪೂಜಾರಿ, ನಾರಾಯಣ ಪೂಜಾರಿ,ಚಂದ್ರಹಾಸ ಶೆಟ್ಟಿ,ಶಾಲಿನಿ,ವಿಮಲ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.