Connect with us

ನಿಧನ

ಕಡಬ: ಹೆಸರಾಂತ ಕಬಡ್ಡಿ ಆಟಗಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ನಿಧನ

Published

on

ಕಡಬ: ಮಿದುಳು ರಕ್ತಸ್ರಾವ (ಬ್ರೈನ್ ಹ್ಯಾಮರೇಜ್)ದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹೆಸರಾಂತ ಕಬಡ್ಡಿ ಆಟಗಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ವರದಿಯಾಗಿದೆ
ಕಡಬ ತಾಲೂಕು ಕೊಂಬಾರು ಗ್ರಾಮದ ಕಮರ್ಕಜೆ ಶಿನಪ್ಪ ಗೌಡರ ಪುತ್ರ ಕೋಕಿಲಾನಂದ ಮೃತಪಟ್ಟವರು.

ಮಿದುಳು ರಕ್ತಸ್ರಾವ ಉಲ್ಬಣಗೊಂಡು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಚಿಕಿತ್ಸೆಯ ನೆರವಿಗಾಗಿ ಅನೇಕ ಸಂಘ ಸಂಸ್ಥೆಗಳು, ಗ್ರಾಮದ ನಿವಾಸಿಗಳು, ಕಬಡ್ಡಿ ಪ್ರೇಮಿಗಳು ಆರ್ಥಿಕ ಸಹಕಾರ ನೀಡಿದ್ದರು.ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು.

 

ಆದರೆ ಇಂದು (ಎ24 ರಂದು) ಚಿಕಿತ್ಸೆ ಫಲಿಸದೆ ಮೃತಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಮೃತರ ಪ್ರಾರ್ಥಿವ ಶರೀರ ಸಂಜೆ ಗಂಟೆ 5 ರ ಹೊತ್ತಿಗೆ ಕಡಬಕ್ಕೆ ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇವರ ನಿಧನಕ್ಕೆ ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತೀವ್ರ ಸಂತಾಪ ಸೂಚಿಸಿದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement