Published
4 hours agoon
By
Akkare Newsಎಪ್ರಿಲ್ 24: ಉಗ್ರರನ್ನು ಕೊಲ್ಲುವ ಬದಲು ಅವರಿಗೆ ಚಿತ್ರಹಿಂಸೆ ನೀಡಿ ಕೊಲ್ಲಬೇಕು ಹೀಗಾದಲ್ಲಿ ಮಾತ್ರ ಉಗ್ರರು ಮತ್ತು ಅವರಿಗೆ ಸಹಕರಿಸುವವರಿಗೆ ಬುದ್ಧಿ ಬರಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಉಗ್ರರನ್ನು ಎನ್ಕೌಂಟರ್ ಮಾಡುವ ಮೊದಲು ಅವರನ್ನು ಹಿಡಿಯಬೇಕು, ಪ್ರತಿದಿನವೂ ಅವರ ಒಂದೊಂದು ಅಂಗಾಗವನ್ನು ಕತ್ತರಿಸಬೇಕುಸ ಕೊನೆಗೆ ಅವರ ತಲೆಯನ್ನೇ ಕತ್ತರಿಸಬೇಕು, ಉಗ್ರರಿಗೆ ಯಾವ ರೀತಿಯಲ್ಲೂ ನ್ಯಾಯದ ವ್ಯವಸ್ಥೆ ನೀಡಬಾರದು ಎಂದರು.
ಉಗ್ರರ ಜೊತೆಗೆ ಅವರಿಗೆ ಸಹಕರಿಸಿದವರನ್ನೂ ಎನ್ಕೌಂಟರ್ ಮಾಡಿ ಕೊಲ್ಲಬೇಕು, ಉಗ್ರರು ದಯೆಗೆ ಅನರ್ಹರು ಎಂದ ಅವರು ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಪಕ್ಷಬೇಧ ಮರೆತು ಖಂಡಿಸಬೇಕು. ಮೊದಲು ನಾವು ಭಾರತೀಯರು, ಆ ಬಳಿಕ ಪಕ್ಷ, ಉಗ್ರರ ವಿರುದ್ದ ಕೇಂದ್ರ ಸರಕಾರ ನಡೆಸುವ ಎಲ್ಲಾ ಕಾರ್ಯಾಚರಣೆಗೆ ಭಾರತೀಯರೆಲ್ಲಾ ಬೆಂಬಲಿಸಬೇಕು ಎಂದರು.