Published
11 hours agoon
By
Akkare Newsನಮಗೆ ಮೊದಲು ದೇಶ ಮುಖ್ಯ. ಇವತ್ತು ನಾನು ಇರ್ತೀನಿ ಹೋಗ್ತೀನಿ, ಮೋದಿ ಇರ್ತಾರೆ ಹೋಗ್ತಾರೆ, ಅಮಿತ್ ಶಾ ಇರ್ತಾರೆ ಹೋಗ್ತಾರೆ. ಆದ್ರೆ ಅಂತಿಮವಾಗಿ ನಮಗೆ ದೇಶ ರಕ್ಷಣೆ ಮುಖ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬೆಂಗಳೂರಿನ ಆರ್.ಟಿ ನಗರದ ತರಳಬಾಳು ಮಠದ ಸಭಾಂಗಣದಲ್ಲಿ ನಡೆದ ʻಸಂಜೆಗೊಂದು ನುಡಿ ಚಿಂತನʼ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಗ್ರರ ವಿರುದ್ಧ ಕಾರ್ಯಾಚರಣೆಗೆ ಬೆಂಬಲ ಕೊಡ್ತೀವಿ ಅಂತ ಈಗಾಗಲೇ ನಾವು ಹೇಳಿದ್ದೇವೆ. ದೇಶಕ್ಕಾಗಿ ಹೋರಾಟ ಮಾಡ್ತೀವಿ ಅಂದರೆ ಅದಕ್ಕೆ ನಮ್ಮ ಬೆಂಬಲ ಇದ್ದೆ ಇರುತ್ತದೆ ಎಂದರು.
ದೇಶದ ಹಿತದೃಷ್ಟಿಯಿಂದ ಏನು ಮಾತಾಡಬೇಕೋ ಅದನ್ನು ಮಾತ್ರ ಮಾತಾಡ್ತಿದ್ದೇವೆ. ಬೇರೆ ಎಲ್ಲವನ್ನೂ ಹೇಳೋದಕ್ಕೆ ಆಗೋದಿಲ್ಲ ಎಂದು ತಿಳಿಸಿದರು.