Published
4 hours agoon
By
Akkare Newsಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಏ.27ರಂದು ಸಂಜೆ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ನಡೆದಿದೆ.
ಕಾರಿನಲ್ಲಿದ್ದ ಜೈಪುರ ಮೂಲದ ಅಬ್ದುಲ್ ಶುಕ್ರು ಚೌಧರಿ ಮೃತಪಟ್ಟವರು.
ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಹುಂಡೈ ಕಂಪನಿಯ ಕಾರು (ಕೆಎ 53, ಎಂಎಚ್ 2048) ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮಿನಿ ಲಾರಿ(ಕೆಎ 41, 4310) ನಡುವೆ ಬರ್ಚಿನಹಳ್ಳದಲ್ಲಿ ಡಿಕ್ಕಿ ಸಂಭವಿಸಿದೆ.