Published
5 hours agoon
By
Akkare Newsಅಪರಾಧಗಳನ್ನು ತಡೆಯುವಲ್ಲಿ ಎಲ್ಲರೂ ಹೆಚ್ಚು ಗಮನಹರಿಸಬೇಕೆಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮಹೇಶ ಜಿ ಹೇಳಿದರು. ಇವರು ಇತ್ತೀಚೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ ಒಂಬತ್ತನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಭೌತಿಕ ಸಾಕ್ಷ್ಯ ಮತ್ತು ಅಪರಾಧ ತನಿಖೆಯ ದೃಶ್ಯಗಳ ಪ್ರಾಮುಖ್ಯತೆ” ಎಂಬ ವಿಷಯದ ಕುರಿತು ಮಾತನಾಡಿದರು.
ಯಾವುದೇ ಒಂದು ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರು ಬಂದು ತನಿಖೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ತನಿಖೆಗೆ ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ನಿಷ್ಕ್ರಿಯತೆಯು ಸರಿ ಅಲ್ಲ. ಅಪರಾಧ ನಡೆದಾಗ ಪ್ರತ್ಯಕ್ಷ ಸಾಕ್ಷಿ ಮತ್ತು ಭೌತಿಕ ಸಾಕ್ಷಿ ಇವೆರಡನ್ನು ತನಿಖೆ ಮಾಡಿದಾಗ ಭೌತಿಕ ಸಾಕ್ಷಿಯೂ ಪ್ರಯೋಜನವಾಗುತ್ತದೆ. ಅಪರಾಧ ನಡೆದರೆ ತನಿಖೆ ಮಾಡಿ ಸಾಕ್ಷಿಯನ್ನು ಪತ್ತೆ ಹಚ್ಚಲು ಮೊದಲು ಆ ಸ್ಥಳವನ್ನು ರಕ್ಷಿಸುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಸ್ ಹಾಗೂ ಎನ್.ಎಸ್.ಎಸ್ ಯೋಜನಾಧಿಕಾರಿಯಾದ ಡಾ. ಹರಿಪ್ರಸಾದ್ ಎಸ್ ಮತ್ತು ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ನಂದೀಶ್ ವೈಡಿ, ಶ್ರೀ ಕೃಷ್ಣ ಡಿ, ಶ್ರೀ ಮಹೇಶ್ ಕುಮಾರ್ ಮತ್ತು ಶ್ರೀ ನಟರಾಜ ಇವರುಗಳು ಉಪಸ್ಥಿತರಿದ್ದರು. ಸ್ವಯಂಸೇವಕಿಯರಾದ ಪುಷ್ಪಾವತಿ, ಸಿಂಚನ ಪ್ರಾರ್ಥಿಸಿದರು. ಪೂಜಾಶ್ರೀ ಸ್ವಾಗತಿಸಿದರು, ಅನುಷಾ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು, ರಕ್ಷಿತಾ ವಂದಿಸಿದರು ಹಾಗೂ ನಿಶ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.