Published
2 hours agoon
By
Akkare Newsಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸೀಕ್ರೇಟ್ ಟ್ರೈನಿಂಗ್ ನೀಡಿದ್ದ ಆರೋಪದಲ್ಲಿ ಎನ್ಐಎ ದಾಖಲಿಸಿದ ದೇಶದ್ರೋಹದ ಪ್ರಕರಣ ಎದುರಿಸುತ್ತಿದ್ದರೂ ಆರು ವರ್ಷಗಳಿಂದ ತಲೆಮರೆಸಿಕೊಂಡೇ ಓಡಾಡುತ್ತಿದ್ದ ಕುಖ್ಯಾತ ಆರೋಪಿ ಮೌಸೀನ್ ಶುಕೂರ್ ಹೊನ್ನಾವರ್ ಎಂಬಾತನನ್ನು ಶಿರಸಿ ಪೊಲೀಸರು ಬಂಧನ ಮಾಡಿದ್ದಾರೆ. ಈತನ ಬೆಂಗಳೂರಿನ ಕೆಜಿ ಹಳ್ಳಿ-ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ನಿಷೇಧಿತ ಪಿಎಫ್ಐ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷ.ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಹೊನ್ನಾವರ್ ಬಂಧಿತ ಆರೋಪಿ.
ವಿಜಯಪುರ ಜಿಲ್ಲೆ ಸಿಂಧಗಿಯಲ್ಲಿ ಕುಟುಂಬದ ಜೊತೆಗೆ ತಿರುಗಾಟ ಹೋಗಿದ್ದಾಗ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಲವು ವಾರೆಂಟ್ ಇದ್ದರೂ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಸೂದ್ ಅಂಗಡಿ ವಿಟ್ಲ ಬಳಿಯ ಮಿತ್ತೂರಿನ ಹಾಲ್ ಒಂದರಲ್ಲಿ ನಡೆಸುತ್ತಿದ್ದ ಪಿಎಫ್ಐ ಸರ್ವಿಸ್ ಟೀಮಿನ ಟ್ರೈನಿಂಗ್ನಲ್ಲೂ ಪಾಲ್ಗೊಂಡಿದ್ದ ಎಂದು ವರದಿಯಾಗಿದೆ.
ಆರೋಪಿ ಶುಕೂರ್ ಹೈದರಾಬಾದ್ನಲ್ಲಿ ಇದ್ದುಕೊಂಡು ಕೆಲವೊಮ್ಮೆ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಕಣ್ಣು ತಪ್ಪಿಸಿ ಶಿರಸಿಗೆ ಬಂದು ಹೋಗುತ್ತಿದ್ದ. ಹೀಗಾಗಿ ಶಿರಸಿಯ ತನ್ನ ಪತ್ನಿಗೆ ಕೇವಲ ಆರು ವರ್ಷಗಳಲ್ಲಿ ಐದು ಮಕ್ಕಳು ಆಗಿದೆ.
ಪ್ರವೀಣ್ ನೆಟ್ಟಾರು ಕೇಸು ಸೇರಿ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಶುಕೂರ್ ಕೈವಾಡ ಇರುವುದರಿಂದ ಎನ್ಐಎ ಮತ್ತು ಕೇಂದ್ರ ಗುಪ್ತಚರ ಇಲಾಖೆಗಳು ಹುಡುಕಾಡುತ್ತಿದ್ದು, ಇದೀಗ ಆರೋಪಿ ಬಂಧನ ಆಗಿದೆ.