Connect with us

ಕ್ರೈಮ್ ನ್ಯೂಸ್

ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 66 ರಷ್ಟು ಫಲಿತಾಂಶ ದಕ್ಷಿಣ ಕನ್ನಡ ಫಸ್ಟ್

Published

on

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಈ ಬಾರಿಯೂ ಸಹ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಶುಕ್ರವಾರ ಕೆಇಎ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಆನ್‌ಲೈನ್ ಮೂಲಕವೂ ವೀಕ್ಷಣೆಗೆ ಅವಕಾಶ ನೀಡಿದೆ. ಸಚಿವ ಮಧುಬಂಗಾರಪ್ಪ ಈ ಕುರಿತು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

 

66.14 ಶೇ ಫಲಿತಾಂಶ ಬಂದಿದ್ದು, ದಕ್ಷಿಣ ಕನ್ನಡ (91.12%) ಹಾಗೂ ಉಡುಪಿ ಜಿಲ್ಲೆ(89.96%) ಹಾಗೂ ಉತ್ತರ ಕನ್ನಡ ಜಿಲ್ಲೆಗೆ(83.19%) ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಸಿಕ್ಕಿದೆ. ಕಲಬುರಗಿ ಜಿಲ್ಲೆಗೆ ರಾಜ್ಯದಲ್ಲಿ ಕೊನೆ ಸ್ಥಾನ ದೊರೆತಿದೆ.

ಇಡೀ ರಾಜ್ಯದಲ್ಲಿ ಕೇವಲ 22 ವಿದ್ಯಾರ್ಥಿಗಳು 625 ಅಂಕಗಳನ್ನು ಗಳಿಸಿದ್ದಾರೆ.

ಇಡೀ ರಾಜ್ಯದಲ್ಲಿ ಪ್ರಥಮ ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಎರಡನೇ ಹಾಗೂ ಮೂರನೇ ಬಾರಿಗೆ ಅವಕಾಶ ನೀಡಲಾಗಿರುವುದರಿಂದ ಈ ಬಾರಿ ಪಿಯುಸಿ ದಾಖಲಾತಿ ಹೆಚ್ಚಾಗಲಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.

 

ಮಾ. 21 ರಿಂದ ಏ. 4 ರವರೆಗೆ ರಾಜ್ಯಾದ್ಯಂತ 2818 ಪರೀಕ್ಷಾ ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆದಿತ್ತು. 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಏ .11 ರಿಂದ ಮೌಲ್ಯ ಮಾಪನ ಪ್ರಕ್ರಿಯೆ ಪ್ರಾರಂಭಗೊಂಡು ಕಳೆದೆರೆಡು ದಿನಗಳ ಹಿಂದೆ ಗಣಕೀಕರಣಗೊಳಿಸಲಾಗಿತ್ತು. 75 ಸಾವಿರ ಮೌಲ್ಯಮಾಪಕರು 50 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಸಿದ್ದರು.


 

Continue Reading
Click to comment

Leave a Reply

Your email address will not be published. Required fields are marked *

Advertisement