Published
4 hours agoon
By
Akkare Newsಪುತ್ತೂರು:
ದಕ್ಷಿಣ ಭಾರತ ಕುಸ್ತಿ ಸಂಘ [ಸೌತ್ ಇಂಡಿಯಾ ರ್ವೆಸಲ್ಲಿಂಗ್ ಅಸೋಸಿಯೇಷನ್]ಗೆ ಚುನಾವಣೆ ನಡೆದಿದ್ದು, 2025-29 ರ ಸಾಲಿಗೆ ಉಪಾಧ್ಯಕ್ಷರಾಗಿ ಕರ್ನಾಟಕ ರಾಜ್ಯದ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಸ್ತಿ ಸಂಘಕ್ಕೆ ದಕ್ಷಿಣ ಭಾರತಕ್ಕೆ ಮೊದಲ ಬಾರಿಗೆ ಪ್ರಮುಖ ಪ್ರಾತಿನಿಧ್ಯೆ ದೊರೆತಿದೆ.
ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ಭಾರತ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.