Published
4 hours agoon
By
Akkare Newsಕೋರ್ಟಿನ ತೀರ್ಪನ್ನು ತಿರುಚಿಸುವ ಕೆಲಸ ಮಾಡಿದ್ದಾರೆ’- ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನ್ಯಾಯಾಲಯದಲ್ಲಿ ಯಾವುದೇ ತಡೆಯಿಲ್ಲ. ನ್ಯಾಯಾಲಯ ‘ನಾಟ್ ಟು ಡಿಸ್ಪೋಸೆಸ್’ ಎಂಬ ಆರ್ಡರ್ ಕೊಟ್ಟಿದೆ. ಯಾರ ಸ್ವಾಧೀನದಲ್ಲಿದೆಯೋ ಅವರನ್ನು ಆದೇಶವಿಲ್ಲದೆ ಡಿಸ್ಪೋಸ್ ಮಾಡಬಾರದು ಎಂದಿದೆ ಹೊರತು ನಮ್ಮ ವಿರುದ್ಧ ಯಾವುದೇ ವಿಷಯಗಳಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ನಾವು ಕೂಡಾ ಪ್ರಶ್ನೆ ಮಾಡಲಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಮನೆ ತೆರವು ಮಾಡಿದ ಕುರಿತು ದೇವಳದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಾಜೇಶ್ ಬನ್ನೂರು ಅವರ ಪತ್ನಿ ಸುಧಾ ಅವರ ಕುರಿತು ನ್ಯಾಯಾಲಯದ ತೀರ್ಪಿನ ವಿಚಾರದಲ್ಲಿ ರಾಜೇಶ್ ಬನ್ನೂರು ಅವರು ಪತ್ರಿಕಾ ಹೇಳಿಕೆ ನೀಡಿರುವುದನ್ನು ಪತ್ರಕರ್ತರು ಪ್ರಶ್ನಿಸಿದಾಗ ಶಾಸಕರು ಉತ್ತರಿಸಿದರು. ನ್ಯಾಯಾಲಯದ ಆದೇಶದಿಂದ ದೇವಸ್ಥಾನದ ಜೀರ್ಣೋದ್ದಾರ ಮತ್ತು ಜಾಗಕ್ಕಾಗಲಿ ಯಾವುದೇ ತೊಂದರೆ ಇಲ್ಲ. ನೋಟ್ ಟು ಡಿಸ್ಪೋಸೆಸ್ ಎಂಬುದನ್ನು ನಾವು ಪ್ರಶ್ನೆ ಮಾಡಲಿದ್ದೇವೆ.
ದೇವಸ್ಥಾನದ ಎಲ್ಲಾ ಜಾಗವನ್ನು ಹಿಂಪಡೆಯುವ ಕೆಲಸ ಮಾಡುತ್ತೇವೆ. ದೇವಸ್ಥಾನಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಇದು ನಮ್ಮ ಮೇಲೆ ವಾದ ಮಾಡುವುದಲ್ಲ. ಯಾರಾದರೂ ವಾದ ಮಾಡುವುದಾದರೆ ಅದು ಮಹಾಲಿಂಗೇಶ್ವರನ ಮೇಲೆ ಮಾಡುವುದು. ನಾನು ನನ್ನ ಮನೆಗೆ ತೆಗೆದು ಕೊಂಡು ಹೋಗಲು ಜಾಗ ಪಡೆದಿರುವುದಲ್ಲ. ನ್ಯಾಯ ಕಟ್ಟೆಗೆ ಹೋಗುವುದಾದರೆ ಮಹಾಲಿಮಗೇಶ್ವರನ ವಿರುದ್ಧ ಹೋದಂತೆ. ವಾದ ಮಾಡುತ್ತಿರುದು, ಚರ್ಚೆ, ಹೋರಾಟ ಮಾಡುವುದು ಮಹಾಲಿಂಗೇಶ್ವರನ ಮೇಲೆ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರು ಅರ್ಥ ಮಾಡಿಕೊಳ್ಳಬೇಕು. ಹಿಂದುತ್ವದ ಬಗ್ಗೆ ಭಾಷಣ ಮಾಡಿದರೆ ಸಾಲದು. ಮಹಾಲಿಂಗೇಶ್ವರ ದೇವರ ಜಾಗೆಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಕೋರ್ಟ್‌ನಲ್ಲೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕೋರ್ಟ್‌ನ ತೀರ್ಪನ್ನು ತಿರುಚಿಸುವ ಕೆಲಸ ಮಾಡಿದ್ದಾರೆ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ರಾಜೇಶ್ ಬನ್ನೂರಿಗಾಗಲಿ ನನಗಾಗಲಿ ವೈಯುಕ್ತಿಕ ಏನು ಇಲ್ಲ. ರಾಜೇಶ್ ಮತ್ತು ನನಗೂ ಯಾವ ಕೇಸು ಇಲ್ಲ. ಈಗ ಸುಧಾ ಕುಮಾರಿಯವರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮೇಲೆ ಕೇಸು ಮಾಡಿರುವುದು. ನಾವು ಮಹಾಲಿಂಗೇಶ್ವರ ದೇವರಿಗೆ ಹೇಗೆ ಕೈ ಮುಗಿಯುತ್ತೇವೋ ಹಾಗೆ ಕೋರ್ಟ್‌ಗೂ ಕೂಡಾ ಕೈ ಮುಗಿಯುತ್ತೇವೆ. ಕೋರ್ಟ್ ಮತ್ತು ಮಹಾಲಿಂಗೇಶ್ವರ ದೇವರು ಸರಿಯಾದ ತೀರ್ಪು ಕೊಟ್ಟೆ ಕೊಡುತ್ತಾರೆ. ಸುಧಾ ಕುಮಾರಿಯವರು ಮಹಾಲಿಂಗೇಶ್ವರ ದೇವಸ್ಥಾನದ ಮೇಲೆ ಕೇಸು ಮಾಡಿದ್ದಾರೆ. ಆದರೆ ಪತ್ರಿಕಾ ಹೇಳಿಕೆ ಕೊಡುವುದು ಮಾತ್ರ ರಾಜೇಶ್ ಬನ್ನೂರು. ಅವರು ಹೇಳಿಕೆ ಕೊಡುವಾಗ ಕೂಡಾ ಕೋರ್ಟ್ ಆದೇಶ ನೀಡಿದ್ದು ಒಂದು ಅವರ ಹೇಳಿಕೆ ಇನ್ನೊಂದು ರೀತಿಯಲ್ಲಿದೆ. ಜಾಗದಲ್ಲಿ ಹೊರಗೆ ಹಾಕಲು ಅಲ್ಲಿ ಯಾರು ಇಲ್ಲ. ಅಲ್ಲಿ ವಾಸ್ತವ್ಯವೇ ಇಲ್ಲ. ಜಾಗ ದೇವಸ್ಥಾನದ್ದು ಎಂದು ಹೇಳಿದೆ. ಹಾಗಾಗಿ ರಾಜೇಶ್ ಬನ್ನೂರು ಅವರು ತೀರ್ಪನ್ನು ತಿರುಚಿಸುವ ಕೆಲಸ ಮಾಡಿದ್ದಾರೆ. ತಪ್ಪು ದಾರಿಗೆ ಜನರನ್ನು ಕೊಂಡೊಯ್ದಿದ್ದಾರೆ.
ಅಲ್ಲಿ ಕಟ್ಟಡ ಕಟ್ಟಬಾರದು ಎಂದು ಆದೇಶವಿದೆ. ಸಂಪೂರ್ಣ ಜವಾಬ್ದಾರಿ ಮಹಾಲಿಂಗೇಶ್ವರ ದೇವಸ್ಥಾನದ್ದು ಎಂದು ಆದೇಶದಲ್ಲಿ ಇದೆ. ನಾವು ಮಹಾಲಿಂಗೇಶ್ವರ ದೇವರ ಚಾಕ್ರಿಯಲ್ಲಿರುವವರು. ಅವರ ಕೈಗೊಂಬೆ ನಾವು. ಏನಿದ್ದರೂ ಮಹಾಲಿಂಗೇಶ್ವರ ದೇವರು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ನಮ್ಮ ಮೂಲಕ ಮಾಡಿಸುತ್ತಾರೆ ಎಂದವರು ಹೇಳಿದರು