Connect with us

ಇತರ

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿ ಜೈಲಿಗೆ ಹೋದರೆ ಸಮಸ್ಯೆ ಆಗುವುದು ನಿಮ್ಮ ಹೆತ್ತವರಿಗೆ – ಪದ್ಮರಾಜ್

Published

on

ಮಂಗಳೂರು ಮೇ 07: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ನಡೆದ ಘಟನೆಯಿಂದ ಜನ ತಲೆತಗ್ಗಿಸುವಂತೆ ಮಾಡಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಮಂಗಳೂರನ್ನು ಹಿಂದಕ್ಕೆ ಕೊಂಡೊಹೋಗುತ್ತಿದ್ದೆ. ಈ ರೀತಿಯ ಕಾರ್ಯ ಜಿಲ್ಲೆಯಲ್ಲಿ ಅಭಿವೃದ್ಧಿಯಿಂದ ಹಿಂದುಳಿಯುವಂತೆ ಮಾಡಿದೆ ಎಂದರು.
ಕುಡುಪು ನಲ್ಲಿ ನಡೆದ ಹತ್ಯೆ ಮಾನವಕುಲ ತಲೆತಗ್ಗಿಸುವಂತದ್ದು. ಈ ವರೆಗೆ ಈ ಕೃತ್ಯಕ್ಕೆ ಕಾರಣ ಏನು ಎಂಬುದು ಇನ್ನೂ ಗೊತ್ತಗಿಲ್ಲ. ಈ ಘಟನೆಯಲ್ಲಿ 21 ಮಂದಿ ಬಂಧನ ಆಗಿದೆ 17 ಮಂದಿಗೆ ನೊಟೀಸ್ ನೀಡಿ ತನಿಖೆ ನಡೆಸಲಾಗಿದೆ.

ಬಜಪೆ ಯಲ್ಲಿ ನಡೆದ ಕೊಲೆ, ಬಳಿಕ‌ ನಡೆದ ಘಟನೆಗಳಿಂದ ಜಿಲ್ಲೆಗೆ ಕಪ್ಪು ಚುಕ್ಕೆ ತಂದಿದೆ. ಈ ಕೊಲೆಯ‌ ಬಳಿಕ ಬಿಜೆಪಿ ನಾಯಕರು ಹಿಂದೂ ಕಾರ್ಯಕರ್ತ ಎಂದು ರಾಜ್ಯ ಮಟ್ಟದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಹಿಂದೂ ಧರ್ಮ ಎಂದು ದ್ವೇಷ ಸಾಧಿಸುವ ಕಾರ್ಯ ಮಾಡ್ತಾ ಇದ್ದಾರೆ. ಭಯೋತ್ಪಾದನೆ ಮುಸ್ಲಿಂ, ಹಿಂದೂ ಎರಡರಲ್ಲೂ ಆಗ್ತಾ ಇದೆ. ಇದನ್ನು ಧರ್ಮದ ಹೆಸರಿಲ್ಲಿ ನೋಡು ಸರಿಯಲ್ಲ‌ ಎಂದರು
ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುವವರು ತಮ್ಮ ತಂದೆ ತಾಯಿ ಗೌರವ ಹೆಚ್ಚಿಸುವಂತೆ ಮಾಡುವಂತಿರಲಿ. ಅದು ಬಿಟ್ಟು ಸಾಮಾಜ ಮುಂದೆ ತಲೆತಗ್ಗಿಸುವಂತೆ ಮಾಡಬೇಡಿ ಎಂದರು.

 

 

 

ಬೆಳ್ತಂಗಡಿ ಶಾಸಕ‌ ಹರೀಶ್ ಪೂಂಜಾ ಮಾತುಗಳನ್ನು ದೇವರು ಮೆಚ್ಚುತ್ತಾರ…? ಶಾಸಕನಾಗಿದ್ದವರು ಇತರರಿಗೆ ಮಾದರಿ ಆಗಬೇಕೆ… ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ರೀತಿಯ ಮಾತುಗಳು ಎಷ್ಟು ಸರಿ. ಈ ವಿಚಾರವನ್ನು ಬಿಜೆಪಿ ನಾಯಕರು ಒಪ್ಪುತ್ತೀರಾ…? ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಪ್ರಶ್ನಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement