Connect with us

ಇತರ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ದಿ ವಿಚಾರ ಮಾಸ್ಟರ್ ಪ್ಲಾನ್‌ನಂತೆ ೧೯ ಕಾಮಗಾರಿಗೆ ೬೦೯೦ ಲಕ್ಷ ರೂ ಅನುದಾನ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಜೊತೆ ಶಾಸಕ ಅಶೋಕ್ ರೈ ಸಭೆ

Published

on

ಪುತ್ತೂರು: ಐತಿಹಾಸಿಕ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ದೇವಸ್ಥಾನದ ಅಭಿವೃದ್ದಿ ಕಾಮಗಾರಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಜೊತೆ ಶಾಸಕ ಅಶೋಕ್ ರೈ ಅವರು ಗುರುವಾರ ಸಭೆ ನಡೆಸಿದ್ದಾರೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಗಿದೆ. ದೇವಸ್ಥಾನದ ಜಾಗದಲ್ಲಿ ಅತಿಕ್ರಮಣ ಮಾಡಿ ನಿರ್ಮಾಣವಾದ ಮನೆಗಳನ್ನು ತೆರವು ಮಾಡಲಾಗಿದೆ ಮತ್ತು ದೇವಳದ ಪಕ್ಕದಲ್ಲಿ ತೋಡಿಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

 

ದೇವಸ್ಥಾನಕ್ಕೆ ಇದೀಗ ವಿಶಾಲವಾದ ಜಾಗವಿದ್ದು , ದೇವಳದ ಎದುರು ಭಾಗದಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಬೇರೆಡೆ ಸ್ಥಳಾಂತರಿಸುವ ಬಗ್ಗೆ ಈಗಾಗಲೇ ಕೆಲಸಕಾರ್ಯಗಳು ನಡೆಯುತ್ತಿದ್ದು, ಹೊಸ ಠಾಣೆಯನ್ನು ಬಸ್ ನಿಲ್ದಾಣದ ಸಮೀಪ ನಿರ್ಮಾಣ ಮಾಡಲು ಜಾಗ ಕಾಯ್ದಿರಿಸಲಾಗಿದೆ.

 

ಮಾಸ್ಟರ್ ಪ್ಲಾನ್‌ಗೆ ಬೇಕು ೬೦೯೦ ಲಕ್ಷ ರೂ

ದೇವಸ್ಥಾನದ ಅಭಿವೃದ್ದಿಗೆ ಈಗಾಗಲೇ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಮಾಸ್ಟರ್ ಪ್ಲಾನ್ ಪ್ರಕಾರ ದೇವಳದ ಅಭಿವೃದ್ದಿಗೆ ೬೦೯೦ ಲಕ್ಷ ರೂಗಳ ಅವಶ್ಯಕತೆ ಇದೆ. ಈಗಾಗಲೇ ಶಾಸಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮುಜರಾಯಿ ಖಾತೆ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ದೇವಸ್ಥಾನದ ಅಭಿವೃದ್ದಿ ಕಾರ್ಯಕ್ಕೆ ಬೇಕಾದ ಅನುದಾನವನ್ನು ನೀಡುವ ಬಗ್ಗೆ ಈಗಾಗಲೇ ಸರಕಾರ ಭರವಸೆ ನೀಡಿದ್ದು, ಕಾಮಗಾರಿಗೆ ಅನುದಾನ ಮತ್ತು ಮಾಸ್ಟರ್ ಪ್ಲಾನ್ ಬಗ್ಗೆ ಚರ್ಚೆ ನಡೆಸಲು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಜೊತೆ ಶಾಸಕರು ಸುದೀರ್ಘ ಸಭೆಯನ್ನು ನಡೆಸಿದ್ದಾರೆ.

 

 

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಈಗಾಗಲೇ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು ಅದರಂತೆ ಕಾಮಗಾರಿ ನಡೆಯಲಿದೆ. ಮಾಸ್ಟರ್ ಪ್ಲಾನ್ ಪ್ರಕಾರ ೬೦೯೦ ಲಕ್ಷ ರೂ ಅನುದಾನ ಬೇಕಾಗಿದೆ. ಇದರ ಬಗ್ಗೆ ಚರ್ಚೆ ನಡೆಸಲು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ವೆಂಕಟೇಶ್ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವೃದ್ದಿ ಮಾಡಿಯೇ ಸಿದ್ದ ಎಂದು ನನ್ನ ಸಂಕಲ್ಪವಾಗಿದೆ.ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಒಂದೊಂದಾಗಿ ಸರಿಹೊಂದುತ್ತಿದೆ. ದೇವಸ್ಥಾನ ಅಭಿವೃದ್ದಿಯಾದರೆ ಇಲ್ಲಿಗೆ ದೇಶದ ನಾನಾ ರಾಜ್ಯಗಳಿಂದ ಭಕ್ತಾದಿಗಳು ಖಂಡಿತವಾಗಿಯೂ ಬರುವಂತಾಗುತ್ತದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಯಾದಲ್ಲಿ ಪುತ್ತೂರಿಗೆ ಭಕ್ತಾದಿಗಳ ಮಹಾಪೂರವೇ ಹರಿದುಬರಲಿದೆ

 

ಅಶೋಕ್ ರೈ, ಶಾಸಕರು, ಪುತ್ತೂರು

 

Continue Reading
Click to comment

Leave a Reply

Your email address will not be published. Required fields are marked *

Advertisement