Connect with us

ಇತರ

ಬಿಗ್ ಬ್ರೇಕಿಂಗ್ ನ್ಯೂಸ್ ಪಾಕಿಸ್ತಾನದಿಂದ ನಿರಂತರ ಡ್ರೋನ್ ದಾಳಿ : ಭಾರತದಿಂದ ಲಾವೋರ್ ಗೆ ದಾಳಿ: ಐಪಿಎಲ್ ಪಂದ್ಯ ರದ್ದು ಗಡಿಯಲ್ಲಿ ಕಟ್ಟೆಚ್ಚರ

Published

on

ಪಾಕ್‌ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಡ್ರೋನ್‌, ಕ್ಷಿಪಣಿ ದಾಳಿ ನಡೆಸುತ್ತಿದೆ. ಇದೀಗ ಭಾರತೀಯ ಸೇನೆ ಜಮ್ಮು ಕಾಶ್ಮೀರ, ಪಂಜಾಬ್‌ ಮುಂತಾದೆಡೆ ನಡೆದ ದಾಳಿಯನ್ನು ವಿಫಲಗೊಳಿಸಿದೆ. ಆಗಸದಲ್ಲೇ ಡ್ರೋನ್‌, ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದೆ.

ಇತ್ತ ಪಾಕ್‌ ದಾಳಿಯಿಂದಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್‌ ಪಂದ್ಯ ರದ್ದಾಗಿದೆ. ಪಂಜಾಬ್‌-ದಿಲ್ಲಿ ಮಧ್ಯದ ಪಂದ್ಯ ಮಧ್ಯದಲ್ಲೇ ರದ್ದುಗೊಳಿಸಿಲಾಗಿದೆ. ಸೇನೆಯ ಸೂಚನೆ ಮೇರೆಗೆ ಮ್ಯಾಚ್‌ ರದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತ ಜಮ್ಮು ವಿಮಾನ ನಿಲ್ದಾಣದ ಬಳಿಕ ಪಂಜಾಬ್‌ನ ಹಲವೆಡೆ ಗುರುವಾರ ಸಂಜೆ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ, ಪಠಾಣ್ಕೋಟ್ ಮುಂತಾದ ಕಡೆ ಪಾಕಿಸ್ತಾನ ಶೆಲ್ಲಿಂಗ್‌ ದಾಳಿ ನಡೆಸಿದೆ.

 

 

ಪಾಕಿಸ್ತಾನದಿಂದ ಡ್ರೋನ್‌ ದಾಳಿ
ಜಮ್ಮು ವಾಯುನೆಲೆ, ಜೈಸಲ್ಮೇರ್‌, ಪಠಾಣ್‌ಕೋಟ್‌, ಅಖ್ನೂರ್‌, ರಾಜೌರಿ, ಪೂಂಚ್‌, ತಂಗಹಾರ್‌, ಸೇರಿದಂತೆ ಗಡಿ ಸಮೀಪದ ಹಲವಾರು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್‌ ದಾಳಿಗೆ ಯತ್ನಿಸಿದೆ. ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಹಮಾಸ್‌ ಉಗ್ರದ ಮಾದರಿಯಲ್ಲೇ ಪಾಕಿಸ್ತಾನ ದಾಳಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಪಾಕ್‌ನ ಯುದ್ದ ವಿಮಾನವನ್ನು ಭಾರತದ ಎಸ್‌-400 (S-400) ಏರ್‌ ಡಿಫೆನ್ಸ್‌ ಸಿಸ್ಟಂ ಡ್ರೋನ್‌ ಮತ್ತು ಕ್ಷಿಪಣಿಯನ್ನು ಹೊಡೆದುರುಳಿಸಿದೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement