Connect with us

ಇತರ

ಭಾರತ ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯ ರದ್ದು ಬಿಸಿಸಿಐ ನಿರ್ಧಾರ

Published

on

ಯುದ್ಧದ ಹಿನ್ನೆಲೆಯಲ್ಲಿ ಬಿಸಿಸಿಐ ನಿರ್ಧಾರ

ನವದೆಹಲಿ: ಭಾರತ ಮತ್ತು ಪಾಕಿಸ್ಥಾನ ನಡುವೆ ಸಮರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್‌ ಕೂಟದ ಇನ್ನುಳಿದ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಯುದ್ಧದ ಭೀತಿ ಹೆಚ್ಚಾಗಿದೆ, ಹೀಗಾಗಿ ಪ್ಲೇ ಆಫ್ಸ್‌ ಸೇರಿ ಇನ್ನೂ 16 ಪಂದ್ಯಗಳು ಬಾಕಿ ಇರುವಾಗಲೇ 2025ರ ಐಪಿಎಲ್‌ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ಘೋಷಿಸಿವೆ. ಈ ಹಿಂದೆ 2021ರ ಕೋವಿಡ್‌ ಸಂದರ್ಭದಲ್ಲಿಯೂ ಐಪಿಎಲ್‌ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಇಂದು ನಡೆದ ಬಿಸಿಸಿಐಯ ಮಹತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

 

 

ನತದೃಷ್ಟ ಆರ್‌ಸಿಬಿ

ಈ ಸಲ ಬೆಂಗಳೂರು ಟ್ರೋಫಿ ಗೆಲ್ಲುವ ಫೇವರಿಟ್‌ ತಂಡದಲ್ಲಿ ಒಂದಾಗಿತ್ತು. ಅಂಕಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಟ್ರೋಫಿ ಗೆಲ್ಲಬೇಕೆಂಬ ಹಾರೈಕೆ ಕೋಟ್ಯಂತರ ಅಭಿಮಾನಗಳದ್ದಾಗಿತ್ತು. ಆದರೆ ಈ ಸಲ ಯುದ್ಧದ ಕಾರಣ ಪಂದ್ಯ ರದ್ದುಗೊಂಡಿದ್ದು, ದುರಾದೃಷ್ಟ ಆರ್‌ಸಿಬಿ ಬೆನ್ನುಬಿಡಲಿಲ್ಲ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement