Published
3 hours agoon
By
Akkare Newsಪುತ್ತೂರು: ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ ಫೀಡರ್ ನಲ್ಲಿ ತುರ್ತು ಕಾಮಗಾರಿ ನಿಮಿತ್ತ ನಾಳೆ ಬೆಳಿಗ್ಗೆ 10:30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೆಎಸ್‌ಆರ್‌ಟಿಸಿ, ಟ್ಯಾಕ್ಸಿ ಸ್ಟಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್, ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರೋಡ್, ಎ.ಪಿ.ಎಂ.ಸಿ. ರೋಡ್, ಸಾಮತ್ತಡ್ಕ, ಎಂ.ಟಿ. ರೋಡ್, ಚಿಕ್ಕಪುತ್ತೂರು ಮತ್ತು ಮಡಿವಾಳಕಟ್ಟೆ ಪರಿಸರದ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪುತ್ತೂರು ಮೆಸ್ಕಾ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.