Published
7 hours agoon
By
Akkare Newsಪುತ್ತೂರು: ಪಡೀಲ್ನಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ನ ಸಿಬ್ಬಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ತಿಳಿದು ಬಂದಿದೆ.
ಪುತ್ತೂರು ಪಡೀಲ್ನಲ್ಲಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಡುಗೆ ತಯಾರಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಲ್ಲಡ್ಕ ಸಮೀಪದ ಬಾಳಿಲ ಗ್ರಾಮದ ಪೂರ್ಲಿಪ್ಪಾಡಿ ನಿವಾಸಿ ಪದ್ಮನಾಭ(42ವ) ಎಂಬವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೃತರು ಮೇ.13ರಂದು ಕಲ್ಲಡ್ಕ ಸಮೀಪ ಪೂರ್ಲಿಪ್ಪಾಡಿ ಮನೆಗೆ ತೆರಳಿದ್ದರು. ಮನೆಯಲ್ಲಿ ಅವರ ಪತ್ನಿ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರು. ಮೇ.14ರಂದು ಮನೆಗೆ ಹಿಂತಿರುಗಿದ ವೇಳೆ ಪದ್ಮನಾಭ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುರಿತು ಬಂಟ್ವಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.