Published
8 hours agoon
By
Akkare Newsಲೋಕಾಯುಕ್ತ ಇಂದು ಬೆಳ್ಳಂಬೆಳಗ್ಗೆ 40 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದೆ. ಬೆಂಗಳೂರು, ಮಂಗಳೂರು, ಯಾದಗಿರಿ, ವಿಜಯಪುರ, ತುಮಕೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 7 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇತರೆ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರಿನಲ್ಲಿ ಕೂಡಾ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಜಿಲ್ಲೆಯ ಸರ್ವೆ ಮೇಲ್ವಿಚಾರಕ ಮಂಜುನಾಥ್ ಅವರು ಆದಾಯಕ್ಕಿಂತ ಅಧಿಕ ಅಪಾರ ಆಸ್ತಿ ಗಳಿಕೆಯ ಆರೋಪ ಹಿನ್ನೆಲೆಯಲ್ಲಿ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಭ್ರಷ್ಟ ಅಧಿಕಾರಿಗಳ ಪಟ್ಟಿ ಇಲ್ಲಿದೆ;
1) ರಾಜಶೇಖರ್ ನಿರ್ಮಿತಿ ಕೇಂದ್ರದ ನಿರ್ದೇಶಕರು ತುಮಕೂರು
2) ಮಂಜುನಾಥ್, ಸರ್ವೆ ಮೇಲ್ವಿಚಾರಕರು, ದ.ಕ ಮಂಗಳೂರು
3) ರೇಣುಕಾ. ಸಾತರ್ಲೆ, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿಜಯಪುರ.
4) ಮುರಳಿ ಟಿವಿ, ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಬೆಂಗಳೂರು ನಗರ
5) ಎಚ್ ಆರ್ ನಟರಾಜ್, ಇನ್ಸ್ಪೆಕ್ಟರ್, ಕಾನೂನು ಮಾಪನಶಾಸ್ತ್ರ ಬೆಂಗಳೂರು
6) ಅನಂತ್ ಕುಮಾರ್ SDA, ಹೊಸಕೋಟೆ ತಾಲೂಕು ಕಛೇರಿ,ಬೆಂಗಳೂರು ಗ್ರಾಮಾಂತರ
7) ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ