Published
8 hours agoon
By
Akkare Newsಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯು ಮೇ.17ರಂದು ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ತಿಳಿಸಿದ್ದಾರೆ.ಈ ಕಾರ್ಯಾಕಾರಿಣಿಯು ಕಾಂಗ್ರೆಸ್ ಪಕ್ಷದಲ್ಲೇ ಪುತ್ತೂರಿನಲ್ಲಿ ಪ್ರಥಮ ಪ್ರಯೋಗವಾಗಿ ಮೂಡಿ ಬರಲಿದೆ. ಸಮಾವೇಶಕ್ಕೆ ಈಗಾಗಲೇ ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸಲಾಗಿದೆ. ಕಾರ್ಯಾಗಾರವು 4 ವಿಭಾಗದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 10ಕ್ಕೆ ವಲಯ ಮತ್ತು ಬೂತ್ ಅಧ್ಯಕ್ಷರುಗಳಿಗೆ, 12 ಗಂಟೆಯಿಂದ ಮಧ್ಯಾಹ್ನ ಗಂಟೆ 2ರ ತನಕ ಸರಕಾರದ ಹಂತದಲ್ಲಿ ನಾಮನಿರ್ದೇಶಿತ ಮತ್ತು ನೇಮಕಗೊಂಡ ಸದಸ್ಯರಿಗೆ, 3 ಗಂಟೆ ಗಂಟೆಯಿಂದ ಸಂಜೆ ಗಂಟೆ 4ರ ತನಕ ಪಕ್ಷದ ಪ್ರಮುಖ ನಾಯಕರಿಗೆ ಕಾರ್ಯಾಗಾರ ನಡೆಯಲಿದೆ. ಸಂಜೆ ಗಂಟೆ 5 ರಿಂದ ರಾತ್ರಿ ಗಂಟೆ 9ರ ತನಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕುಟುಂಬ ಸಮ್ಮಿಲನ ನಡೆಯಲಿದೆ.
ಒಟ್ಟು ಬೆಳಗ್ಗಿನಿಂದ ಸಂಜೆಯ ತನಕ ಸುಮಾರು 6 ಸಾವಿರ ಮಂದಿ ಭಾಗವಹಿಸಲಿದ್ದು, ಒಂದೊಂದು ಅವಧಿಯಲ್ಲಿ 1400 ಮಂದಿ ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಆಹ್ವಾನಿತರಿಗೆ ಮಾತ್ರ ಅವಕಾಶವಿದೆ. ಸಂಜೆಯ ಕಾರ್ಯಾಗಾರದಲ್ಲಿ ಕುಟುಂಬ ಸಮೇತ ಅವರು ಬರಲಿದ್ದಾರೆ.
ಅವರಿಗೆ ಸುಮಾರು ರೂ. 1500 ಮೌಲ್ಯದ ಗಿಫ್ಟ್ ಕೊಡಲಿದ್ದೇವೆ. ಸುಮಾರು 40ಲಕ್ಷ ಖರ್ಚು ತಗುಲಲಿದೆ ಎಂದು ಶಾಸಕರು ಹೇಳಿದರು.
‘