Published
7 hours agoon
By
Akkare Newsಪ್ರಸ್ತುತ ಕಾಲಘಟ್ಟದಲ್ಲಿ ಡಿಜಿಟಲ್ ಮಹತ್ವ ಹೆಚ್ಚಾಗುತ್ತಿರುವುದರಿಂದ ಡಿಜಿಟಲ್ ಮೂಲಕ ಬೇರೆ ಬೇರೆ ರೀತಿಯ ಕೋರ್ಸ್ ಗಳನ್ನು ಮಾಡಿ ಕೌಶಲ್ಯ ಮತ್ತು ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಮಮತಾ ಬಿ ಆರ್ ಹೇಳಿದರು. ಇವರು ಇತ್ತೀಚೆಗೆ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಆಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದ 11ನೇ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಡಿಜಿಟಲ್ ಕಲಿಕೆಯ ವೇದಿಕೆಗಳು” ಎಂಬ ವಿಷಯ ದ ಕುರಿತು ಮಾತನಾಡಿದರು.
.
MOOC,SWAYAM ನಂತಹ ಆನ್ಲೈನ್ ವೇದಿಕೆಗಳ ಮೂಲಕ ಅವಶ್ಯಕ ಕೋರ್ಸ್ ಗಳಿಗೆ ನೋಂದಣಿ ಮಾಡಿಕೊಂಡು ಅಧ್ಯಯನ ಮಾಡಬೇಕು ಎಂದರು. ಆನ್ಲೈನ್ ಕೋರ್ಸ್ ಗಳನ್ನು ಮಾಡಿ ಉದ್ಯೋಗ ಕ್ಷೇತ್ರಕ್ಕೆ ಬೇಕಾಗುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎನ್. ಎಸ್.ಎಸ್ ಯೋಜನಾಧಿಕಾರಿಗಳಾದ ಡಾ. ಹರಿಪ್ರಸಾದ್ ಎಸ್ ಮತ್ತು ಶ್ರೀಕೇಶವಕುಮಾರ್ ಬಿ ಇವರುಗಳು ಉಪಸ್ಥಿತರಿದ್ದರು. ಸ್ವಯಂ ಸೇವಕಿಯಾದ ಸಿಂಚನ ಪ್ರಾರ್ಥಿಸಿದರು, ಕೌಶಿತ ಸ್ವಾಗತಿಸಿದರು, ಹೇಮಚಂದ್ರ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು, ಜಯಶ್ರೀ ವಂದಿಸಿದರು ಮತ್ತು ಅಶ್ವಿನಿ ಎಂ ಕಾರ್ಯಕ್ರಮ ನಿರ್ವಹಿಸಿದರು.