Published
6 hours agoon
By
Akkare Newsಪುತ್ತೂರು: ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿಯೇ ಐದನೇ ರ‍್ಯಾಂಕ್ ಪಡೆದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ನಿಹಾಲ್ ಎಚ್. ಶೆಟ್ಟಿ ಮತ್ತು ಕುಟುಂಬಸ್ಥರು ಮೇ.18ರಂದು ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
.
ಬೆಂಗಳೂರು ಸೋಹಮ್ ಪವರ್ ಪ್ರಾಜೆಕ್ಟ್ ಸಂಸ್ಥೆಯ ಉನ್ನತ ಅಧಿಕಾರಿ ಹರೀಶ್ ಶೆಟ್ಟಿ ಮತ್ತು ಶೀಲಾ ಹರೀಶ್ ಶೆಟ್ಟಿ ಅವರ ಪುತ್ರರಾದ ನಿಹಾಲ್ ಶೆಟ್ಟಿ ಅವರು 621 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ ಐದನೇ ರ‍್ಯಾಂಕ್ ಪಡೆಯುವ ಮೂಲಕ ತನ್ನ ಸಾಧನೆಯಿಂದ ಪುತ್ತೂರು ತಾಲೂಕಿಗೆ ಮತ್ತು ದ.ಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ನಿಹಾಲ್ ಅವರು ಸಣ್ಣ ಮಗು ಆಗಿದ್ದಾಗ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಅಕ್ಷರಾಭ್ಯಾಸ ಮಾಡಿದ್ದರು ಎಂಬುದನ್ನು ಅವರ ಮನೆಯವರು ಈ ವೇಳೆ ಸ್ಮರಿಸಿಕೊಂಡರು.